ಕುಟುಂಬ ಸಮೇತ ತಿರುಪತಿಗೆ ಭೇಟಿ ನೀಡಿದ ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಷೋದಯಕ್ಕೆ ಮುನ್ನ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ತಿರುಮಲಕ್ಕೆ ತೆರಳಿ ಕಲಿಯುಗ ಪ್ರತ್ಯಕ್ಷ ದೈವ, ವೈಕುಂಠವಾಸ ಶ್ರೀ ವೆಂಕಟೇಶ್ವರ ಸ್ವಾಮಿ ಅವರ ದರ್ಶನ ಭಾಗ್ಯ ಪಡೆದು ಪುನೀತರಾಗಿದ್ದಾರೆ.

2030ರ ವೇಳೆಗೆ ಭಾರತದಲ್ಲಿ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ, ದೃಢ ಸಂಕಲ್ಪ ಗೌರವಾನ್ವಿತ ಪ್ರಧಾನಿಗಳಾದ  ನರೇಂದ್ರ ಮೋದಿ ಅವರದ್ದಾಗಿದ್ದು, ಪ್ರಧಾನಿಗಳ ಆಶಯದಂತೆ ಆಂಧ್ರ ಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ (RINL) ಅಥವಾ ವೈಜಾಗ್ ಸ್ಟೀಲ್ ಪುನಶ್ಚೇತನಕ್ಕೆ 11,400 ಕೋಟಿಗಳ ಬೃಹತ್ ಪ್ಯಾಕೇಜ್ ಘೋಷಿಸಲಾಗಿದೆ. ಇದು ಮೋದಿ ಅವರ ಸರಕಾರ ಕೈಗೊಂಡ ಐತಿಹಾಸಿಕ ನಿರ್ಧಾರವಾಗಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಪ್ಯಾಕೇಜ್ ಘೋಷಣೆ ನಂತರ ಇಂದು ಬೆಳಗ್ಗೆ ಶ್ರೀ ಬಾಲಾಜಿಯ ದರ್ಶನ ಪಡೆದು  ನನ್ನ ಸಹೋದ್ಯೋಗಿ ಹಾಗೂ ಬೃಹತ್ ಕೈಗಾರಿಕೆ & ಉಕ್ಕು ಖಾತೆ  ಸಹಾಯಕ ಸಚಿವರಾದ ವರ್ಮಾ ಅವರೊಂದಿಗೆ ವಿಶಾಖಪಟ್ಟಣಕ್ಕೆ ಭೇಟಿ ನೀಡಿದ್ದಾರೆ.

 

 

 

Share This Article
error: Content is protected !!
";