ಹೊರ ರಾಜ್ಯ ಛತ್ತಿಸಗಢದ ಬಿಲಾಯ್ ಕನ್ನಡ ಸಂಘದ ವತಿಯಿಂದ ಕುಮಾರಸ್ವಾಮಿಗೆ ಸನ್ಮಾನ
ಚಂದ್ರವಳ್ಳಿ ನ್ಯೂಸ್, ಛತ್ತಿಸಗಢ:
ಕೇಂದ್ರ ಸರ್ಕಾರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಛತ್ತಿಸಗಢದ ಬಿಲಾಯ್ ಉಕ್ಕು ಕಾರ್ಖಾನೆಗೆ ಭೇಟಿ ನೀಡಲು ಹೋಗಿದ್ದ ಸಂದರ್ಭದಲ್ಲಿ ‘ಬಿಲಾಯ್ ಕನ್ನಡ ಸಂಘ’ದ ಸದಸ್ಯರು ಭೇಟಿಯಾಗಿ ಆತ್ಮೀಯವಾಗಿ ಅಭಿನಂದಿಸಿದರು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಕುಮಾರಸ್ವಾಮಿ ತಿಳಿಸಿದ್ದಾರೆ.
‘ಬಿಲಾಯ್ ಕನ್ನಡ ಸಂಘ’ದ ಸದಸ್ಯರುಗಳ ಕನ್ನಡತನ, ಮಾತೃಭಾಷಾ ಪ್ರೇಮ, ತಾಯ್ನಾಡಿನ ಬಗೆಗಿನ ಅಕ್ಕರೆಯನ್ನು ಕಂಡು ನನ್ನ ಮನಸ್ಸು ತುಂಬಿ ಬಂದಿದೆ ಎಂದು ಕುಮಾರಸ್ವಾಮಿ ಅವರು ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಸಂಘದ ಸದಸ್ಯರಾದ ಶಶಿಭೂಷಣ್, ವೆಂಕಟೇಶ್ ಕಾರಂತ್, ಶ್ರೀಧರ್, ನಾಗೇಂದ್ರ ಧನ, ಅನುರಾಧ ಧನ, ವೆಂಕಟೇಶ್ ಬಾಬು, ನಂದಕುಮಾರ್, ಸುಚಿತ್ರಾ, ರೀಟಾ, ಚಂದ್ರಲತಾ ಅವರುಗಳು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಅದ್ಧೂರಿಯಾಗಿ ಸನ್ಮಾನಿಸಿದ್ದಾರೆ.