ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದ ಬೇತೂರು ಪಾಳ್ಯದ ಡಾ.ಜೆ ರಾಜು ರವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ಕುಂಚಿಟಿಗ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿ ಉಪನ್ಯಾಸಕನಾಗಿ ವೃತ್ತಿ ಜೀವನ ಆರಂಭಿಸಿದೆ. ಬದಲಾದ ಸನ್ನಿವೇಶದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಹಾಗೂ ರಾಜ್ಯಮಟ್ಟದ ಬಿಬಿಎಂಪಿ ಉಪಯುಕ್ತರಾಗಿ ಸೇವೆ ಸಲ್ಲಿಸಿದ ಸಂದರ್ಭದ ಕೆಲವೊಂದು ಸಮಾಜಮುಖಿ ಕೆಲಸಗಳು ನನಗೆ ಗೌರವ ಡಾಕ್ಟರೇಟ್ ಪದವಿ ಲಭಿಸಲು ಕಾರಣವಾಗಿದೆ ಎಂದು ಅವರು ಭಾವುಕರಾದರು.
ಈ ಹಿಂದೆ ಕೊಪ್ಪಳದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬುಡಕಟ್ಟು ಜನರಿಗೇ ಭೂಮಿ ಖರೀದಿ ಯೋಜನೆಯಲ್ಲಿ ಆರುನೂರಕ್ಕೂ ಹೆಚ್ಚು ಜನರಿಗೆ ಕಡಿಮೆಯ ಅವಧಿಯಲ್ಲಿ ಭೂಮಿ ಕೊಡಿಸಲಾಗಿತ್ತು.
ಚಿತ್ರದುರ್ಗ ಜಿಲ್ಲೆ ಸಮಾಜ ಕಲ್ಯಾಣ ಅಧಿಕಾರಿಯಾಗಿದ್ದಾಗ ಬುಡಕಟ್ಟು ಜನರಿಗೆ ಗಿರಿಜನ ಯೋಜನೆಯಲ್ಲಿ ಭೂಮಿ ಮಂಜೂರು ಮಾಡಿಸಲು ಸತತ ಪ್ರಯತ್ನ ಪಟ್ಟು ಯಶಸ್ವಿಯಾಗಿದ್ದಕ್ಕೆ ಹಾಗೂ ಬೆಂಗಳೂರಿನ ಬಿಬಿಎಂಪಿಯಲ್ಲಿ ವಿಕಲಚೇತನರಿಗೆ,
ಇತರರಿಗೆ ವಿವಿಧ ಸವಲತ್ತುಗಳನ್ನು ಜವಾಬ್ದಾರಿಯಿಂದ ಕೊಡಿಸಿದ್ದಕ್ಕೆ ಗುಜರಾತಿನ ಅಹ್ಮದಾಬಾದ್ ನಲ್ಲಿರುವ ಗಾಂಧಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ ಎಂದು ರಾಜು ತಿಳಿಸಿದರು.
ಇದು ನನ್ನ ಸಂತೋಷದ ಕ್ಷಣ ನಾನು ಸಮಾಜದ ಜೊತೆ ಯಾವತ್ತು ಇದೇ ರೀತಿ ಇರುತ್ತೇನೆ ಎಂದು ಡಾ.ರಾಜು ಹೇಳಿದರು.
ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಉಪನ್ಯಾಸಕರಾಗಿ ಸಮಾಜ ಕಲ್ಯಾಣ ಅಧಿಕಾರಿಯಾಗಿ ಹಾಗೂ ರಾಜ್ಯಮಟ್ಟದ ಬಿಬಿಎಂಪಿ ಉಪಯುಕ್ತ ರಾಗಿದ್ದರು ಮೊದಲಿನ ಸರಳತೆ, ಬದ್ಧತೆ ನೇರ ನುಡಿ ಅವರನ್ನು ಇಂತಹ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದೆ ಎಂದರು.
ಈ ಪ್ರಶಸ್ತಿಯನ್ನು ಕರ್ನಾಟಕದವರೆ ಆಗ ಕೇಂದ್ರ ಕೈಗಾರಿಕೆ ಉಕ್ಕು ಸಚಿವರು ಎಚ್ ಡಿ ಕುಮಾರಸ್ವಾಮಿ ಅವರು ಪ್ರಧಾನ ಮಾಡಿದ್ದು ಸಂತೋಷದ ವಿಚಾರ ಎಂದ ಅವರು ಸೇವೆ ಸಮಾಜಕ್ಕೆ ಇನ್ನು ಹೆಚ್ಚು ಕಾಲ ಲಭಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಕೆ ಟಿ ರುದ್ರಮುನಿ, ಎಚ್ಆರ್ ತಿಮ್ಮಯ್ಯ, ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಕೆ ಜಿ ಹನುಮಂತರಾಯ, ಪ್ರಾಂಶುಪಾಲ ವಸಂತ್ ಕುಮಾರ್, ಬಬ್ಬೂರ್ ಕುಮಾರ್, ಬೈರೇಶ್ ಪಟೇಲ್, ಆಪ್ಟಿಕಲ್ಸ್ ರಾಜೇಶ್, ಕಾಡುಗೊಲ್ಲರ ಸಂಘದ ಅಧ್ಯಕ್ಷ ಪಿ ಆರ್ ದಾಸ್,
ವಕೀಲರಾದ ಪಾಂಡು, ಹುಚ್ಚವನಹಳ್ಳಿ ಗಿರೀಶ್, ತಿಮ್ಮನಹಳ್ಳಿ ರಾಜು, ಸಿಮೆಂಟ್ ವರ್ತಕ ಜಗದೀಶ್, ಪರಮೇನಹಳ್ಳಿ ರಂಗನಾಥ್, ಶಿವಮೂರ್ತಿ, ಕೊಂಡೇತಿಮ್ಮನಹಳ್ಳಿ ರಘು, ತ್ಯಾರನಾಯಕ, ಜೆಡಿಎಸ್ ಯುವ ಅಧ್ಯಕ್ಷ ಚೇತನ್ ಗೌಡ ಸೇರಿದಂತೆ ಮತ್ತಿತರರು ಇದ್ದರು.

