ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಡಿಸೆಂಬರ್- 15ರಂದು ಕುಂಚಿಟಿಗರ ಕ್ಯಾಲೆಂಡರ್ ಬಿಡುಗಡೆ ಕುರಿತು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹಿರಿಯೂರು ತಾಲ್ಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಸಭೆ ನಡೆಯಿತು.
ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರೊ.ಶಿವಣ್ಣರವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಮುಂಬರುವ ಡಿಸೆಂಬರ್ 15ರಂದು ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು.
2026ರ ಜನವರಿ ತಿಂಗಳಲ್ಲಿ ತಮಿಳುನಾಡು ಪ್ರವಾಸ ಕೈಗೊಳ್ಳುವುದು ಮತ್ತು ಹಿರಿಯ ನಾಗರೀಕರಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ರಾಜ್ಯಾಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಕೆ.ಜಿ ಹನುಮಂತರಾಯಪ್ಪ, ಉಪಾಧ್ಯಕ್ಷ ಎಂ.ಆರ್.ಜೋಗೇಶ್, ಖಜಾಂಚಿ ಮಂಜನಾಥ ಕಾತ್ರಿಕೆನಹಳ್ಳಿ, ಚೇತನ್ ಗೌಡ, ದಿಂಡವರ ಚಂದ್ರಗಿರಿ, ಕೆಕೆ ಹಟ್ಟಿ ಜಯಪ್ರಕಾಶ್, ಮಾಸ್ತಿ ಕಟ್ಟೆ ಚಂದ್ರಶೇಖರ್, ವಾಣಿ ಮಹಾಲಿಂಗಪ್ಪ, ಕುಸುಮ ವಿ ವಿ ಪುರ, ವಕೀಲ ಲಕ್ಷ್ಮಣ್, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.

