ಆನೆಗಳಿಗೆ ಕುಶಾಲು ತೋಪು ಪೂರ್ವಭಾವಿ ಅಭ್ಯಾಸ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ದಸರಾ ಅಂಗವಾಗಿ ನಗರದಲ್ಲಿರುವ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆನೆಗಳು ಮತ್ತು ಕುದುರೆಗಳಿಗೆ ಕುಶಾಲತೋಪು ಪೂರ್ವಭಾವಿ ಅಭ್ಯಾಸವನ್ನು ಇಂದು ವಾಹನ ನಿಲುಗಡೆ ಸ್ಥಳದಲ್ಲಿ ನಡೆಸಲಾಯಿತು.
ಕ್ಯಾಪ್ಟನ್ ಅಭಿಮನ್ಯು ನೇತ್ರತ್ವದ ಗಜಪಡೆಗೆ ಇಂದು 21 ಕುಶಾಲ ತೋಪು ಹಾರಿಸುವ ಮೂಲಕ ಈ ಅಭ್ಯಾಸ ನಡೆಸಲಾಯಿತು.

ಮೈಸೂರು ದಸರಾದ ಆಕರ್ಷಣೆಯ ವಾದ ಜಂಬುಸವಾರಿ ದಿನದಂದು ಅರಮನೆ ಆವರಣದಲ್ಲಿ ನಾಡ ಅದಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮುನ್ನ 21 ಕುಶಾಲತೋಪನ್ನು ಹಾರಿಸಲಾಗುತ್ತದೆ. ಆನೆಗಳು ಕುದುರೆಗಳು ಈ ವೇಳೆ ಹೆದರಬಾರದು ಎಂಬ ಹಿನ್ನೆಲೆಯಲ್ಲಿ ಇಂದು ಕುಶಾಲತೋಪು ಅಭ್ಯಾಸವನ್ನು ನಡೆಸಲಾಯಿತು.

ಇಂದು ಮೊದಲ ಸುತ್ತಿನ ಕುಶಾಲತೋಪು ಅಭ್ಯಾಸವನ್ನು ನಡೆಸಲಾಗಿದೆ. ಇನ್ನು ಎರಡು ಬಾರಿ ಅಂದರೆ ಸೆ. 29 ಹಾಗೂ ಅ. 1 ರಂದು ಕುಶಾಲ ತೋಪು ಅಭ್ಯಾಸವನ್ನು ನಡೆಸಲಾಗುವುದು.
ಮೈಸೂರು ಅರಮನೆಯ ಆವರಣದಲ್ಲಿ ಬೀಡು ಬಿಟ್ಟಿರುವ ಆನೆಗಳಿಗೆ ಸ್ವಾಗತವನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಮಾಡಲಾಯಿತು.

- Advertisement -  - Advertisement -  - Advertisement - 
Share This Article
error: Content is protected !!
";