ಧರ್ಮಸ್ಥಳದಲ್ಲಿ ಮಾಧ್ಯಮದವರ ಮೇಲೆ ಹಲ್ಲೆ: ಕೆಯುಡಬ್ಲ್ಯೂಜೆ ಖಂಡನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಧರ್ಮಸ್ಥಳದಲ್ಲಿ ಮಾಧ್ಯಮದವರ ಮೇಲೆ ನಡೆದ ಹಲ್ಲೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಖಂಡಿಸಿದೆ.

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಕೆಲ ಘಟನೆಗಳು ಕಳವಳಕಾರಿಯಾಗಿದೆ. ತನಿಖೆಯಲ್ಲಿ ಸತ್ಯ ಸಂಗತಿ ಹೊರಬರಲಿ ಎನ್ನುವುದು ಎಲ್ಲರ ನಿರೀಕ್ಷೆ. ಈ ಹೊತ್ತಿನಲ್ಲಿ ಮಾಧ್ಯಮಗಳ ಅತಿರೇಕದ ವರ್ತನೆ ಸರಿಯಲ್ಲ ಕೆಯುಡಬ್ಲ್ಯೂಜೆ ಪ್ರತಿಕ್ರಿಯಿಸಿದೆ.

- Advertisement - 

ಧಾವಂತದ ವರದಿಗಳ ಬದಲಿಗೆ ಸಂಯಮವಿರಲಿ ಎಂದು ಸಲಹೆ ನೀಡಿದೆ. ಸುವರ್ಣ ಟಿವಿ ವರದಿಗಾರ ಹರೀಶ್ ಮೇಲೆ ನಡೆದ ಹಲ್ಲೆ ಖಂಡನೀಯ ಮತ್ತು ಯುಟೂಬರ್ಸ್ ಗಳ ಮೇಲಿನ ಹಲ್ಲೆ ಕೂಡ ಖಂಡನೀಯ. ಈ ಘಟನೆಗಳಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಕೆಯುಡಬ್ಲ್ಯೂಜೆ ಆಗ್ರಹಿಸಿದೆ.

- Advertisement - 
Share This Article
error: Content is protected !!
";