KUWJ 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2023ನೇ ಸಾಲಿನ ಕೆಳಕಂಡ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರಿಂದ   ವರ್ಷದ ವರದಿ/ಲೇಖನ/ಸುದ್ದಿ ಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ.

ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, 3ನೇ ಮಹಡಿ, ಕಂದಾಯ ಭವನ, ಬೆಂಗಳೂರು09 ಇಲ್ಲಿಗೆ ದಿನಾಂಕ 11.11.2024 ರೊಳಗೆ ತಲುಪುವಂತೆ ತಮ್ಮ ಸ್ವ ಪರಿಚಯದೊಂದಿಗೆ ಅರ್ಜಿಯನ್ನು ಕಳುಹಿಸಿಕೊಡಬೇಕು ಎಂದು ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ತಿಳಿಸಿದ್ದಾರೆ.

ಪ್ರಶಸ್ತಿಗಳ ವಿವರ:
1.
ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿ)
2.
ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ)
3.
ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ)
4.
ಬಿ. ಎಸ್.ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ)
5.
ಕೆ. . ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿ)
6.
ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ)
7.
ಮಂಗಳ ಎಂ. ಸಿ. ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆಯಲ್ಲಿ ಚಿತ್ರ ಲೇಖನಕ್ಕೆ)

8. ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ (ರೈತಾಪಿ ಜನರ ಸಮಸ್ಯೆ ವರದಿ)
9.
ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ವರದಿ)
10.
ಆರ್.ಎಲ್. ವಾಸುದೇವರಾವ್ ಪ್ರಶಸ್ತಿ (ವನ್ಯ ಪ್ರಾಣಿಗಳ ಕುರಿತ ಅತ್ಯುತ್ತಮ ವರದಿ)
11.
ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿ)
12.
ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನಜೀವನದ ಅತ್ಯುತ್ತಮ ವರದಿಗೆ)
13.
ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ (ಬೆಂಗಳೂರು ಮತ್ತು ಗ್ರಾಮಾಂತರ ಜಿಲ್ಲೆ ಅಭಿವೃದ್ಧಿ)
14.
ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾದ ಕೃಷಿ ವರದಿ)
15.
ನಾಡಿಗೆರ ಕೃಷ್ಣರಾಯರ ಪ್ರಶಸ್ತಿ (ಅತ್ಯುತ್ತಮ ವಿಡಂಬನಾತ್ಮಕ ಲೇಖನಕ್ಕೆ)

16. ಅತ್ಯುತ್ತಮ ಪುಟ ವಿನ್ಯಾಸಗಾರರು (ಡೆಸ್ಕ್ ನಲ್ಲಿ ಕೆಲಸ)
17.
ನ್ಯಾಯಾಲಯದ (ಕೋರ್ಟ್ ಬೀಟ್) ಅತ್ಯುತ್ತಮ ವರದಿ.
18.
ಸುಣ್ಣವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ. (ಅತ್ಯುತ್ತಮ ಸೇನಾ ವರದಿ)
19.
ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ ( ಇಂಗ್ಲೀಷ್ ಪತ್ರಿಕೆಯ ವರದಿ)
20.
ಟಿ.ಕೆ.ಮಲಗೊಂಡ ಪ್ರಶಸ್ತಿ (ಅತ್ಯುತ್ತಮ ತನಿಖಾ ವರದಿ)
21.
ಚಲನಚಿತ್ರ ನಟ, ನಿರ್ದೇಶಕ ದಿ. ದ್ವಾರಕೀಶ್ ಸ್ಮಾರಕ ಪ್ರಶಸ್ತಿ (ಚಲನಚಿತ್ರ ವಿಮರ್ಶಾ ವರದಿ)

ವಿದ್ಯುನ್ಮಾನ (ಟಿವಿ)ವಿಭಾಗ:
22.
ಅತ್ಯುತ್ತಮ ತನಿಖಾ ವರದಿ
23.
ಅತ್ಯುತ್ತಮ ಸಾಮಾಜಿಕ, ಮಾನವೀಯ ವರದಿ
24.
ಅತ್ಯುತ್ತಮ ಆ್ಯಂಕರ್ ಪ್ರಶಸ್ತಿ
25.
ಅತ್ಯುತ್ತಮ ರಾಜಕೀಯ ವಿಶ್ಲೇಷಣೆ

ಷರತ್ತುಗಳು :
1.
ಪ್ರಶಸ್ತಿಗೆ 2023 ಜನವರಿ 1 ರಿಂದ 2023 ಡಿಸೆಂಬರ್ 31 ರೊಳಗೆ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನ/ ವರದಿ/ ವಿಶೇಷ ವರದಿ ಸುದ್ದಿ ಛಾಯಾ ಚಿತ್ರಗಳನ್ನು ಕಳುಹಿಸಬೇಕು.
2.
ವರದಿ/ಲೇಖನ ಯಾವ ಪ್ರಶಸ್ತಿಗೆ ಎಂಬುದನ್ನು ಮುಖಪುಟದಲ್ಲಿ ಸ್ವಷ್ಟವಾಗಿ ಬರೆದಿರಬೇಕು.
3.
ಅನುವಾದ ಮಾಡಿದ ವರದಿ/ಲೇಖನ ಪರಿಗಣಿಸುವುದಿಲ್ಲ. ಒಬ್ಬರು ಗರಿಷ್ಠ ಮೂರು ಪ್ರಶಸ್ತಿಕ್ಕಿಂತ ಹೆಚ್ಚು ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತಿಲ್ಲ.

4. ರಾಜ್ಯ ಸಂಘ, ಜಿಲ್ಲಾ ಮತ್ತು ತಾಲ್ಲೂಕು ಸಂಘದ ಪದಾಧಿಕಾರಿಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
5.
ಲೇಖನ ವರದಿಗಳನ್ನು ಮೂರು ಪ್ರತಿಗಳಲ್ಲಿ (ಜೆರಾಕ್ಸ್ ಪ್ರತಿಗಳಾದರೆ ದೃಢೀಕೃತವಾದ ಪ್ರತಿ ಇರಬೇಕು.) ಕಳುಹಿಸಬೇಕು.
6.
ವಿದ್ಯುನ್ಮಾನ ಮಾಧ್ಯಮದ ಪ್ರಶಸ್ತಿಗಳ ಪ್ರವೇಶಕ್ಕೆ ವರದಿ ಪ್ರಸಾರವಾದ ಕ್ಲಿಪಿಂಗ್ (ಸಿಡಿ ಅಥವಾ ಪೆನ್ಡ್ರೈವ್) ಮತ್ತು ಅದರ ಸ್ಕ್ರಿಪ್ಟ್ಗಳನ್ನು ಸಂಪಾದಕರ ದೃಢೀಕರಣ ಸಹಿತ ಕಳುಹಿಸಬೇಕು.
7.
ಅರ್ಜಿ ಸಲ್ಲಿಸುವವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವದ ಗುರುತಿನ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು.

8. ಲೇಖನದ ಜೊತೆಯಲ್ಲಿ ಸ್ವ ಪರಿಚಯ, ಪೂರ್ಣ ವಿಳಾಸ, ಮೊಬೈಲ್ ನಂಬರ್ ಮತ್ತು ಪಾಸ್ ಪೋರ್ಟ್ ಸೈಜ್ ಭಾವಚಿತ್ರ ಕಳುಹಿಸಬೇಕು.
9.
ಈಗಾಗಲೇ ಒಂದು ಬಾರಿ ಪ್ರಶಸ್ತಿಯನ್ನು ಪಡೆದವರು, ಮತ್ತೆ ಅದೇ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಷರತ್ತುಗಳನ್ನು ಉಲ್ಲಂಘಿಸಿ ಬರುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಅವರು ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";