ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುದ್ದಿಮನೆ ಕ್ರಿಯಾಶೀಲ ಇಬ್ಬರು ಪತ್ರಕರ್ತರನ್ನು ಕಳೆದುಕೊಂಡಿದೆ.
ಜನಶ್ರೀ, ಈ ಟಿವಿ, ಸುಪ್ರಭಾತ, ಉದಯ ಟಿವಿಯಲ್ಲಿ ಸೇವೆ ಸಲ್ಲಿಸಿದ್ದ ಪುತ್ತೂರಿನ ಸುಂದರ್ ಕಬಕ ಅವರು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು.
ಮತ್ತೊಂದೆಡೆ ಹೊಸದುರ್ಗ ತಾಲೂಕು ಕಾರೇಹಳ್ಳಿಯ ಗ್ರಾಮದ ಎಂ.ಡಿ.ಮಂಜುನಾಥ್ ಅವರು ಬೆಂಗಳೂರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆ ಡಿಸೈನರ್ ಆಗಿದ್ದರು. ಜೊತೆಗೆ ಉತ್ತಮ ಯೋಗಪಟು ಕೂಡ. ಸುಧೀರ್ಘ ಅನಾರೋಗ್ಯದ ಬಳಿಕ ಅವರು ಮೃತಪಟ್ಟಿದ್ದಾರೆ.
ಪತ್ರಕರ್ತ ಸುಂದರ್ ಮತ್ತು ಡಿಸೈನರ್ ಮಂಜುನಾಥ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ )ಸಂತಾಪ ವ್ಯಕ್ತಪಡಿಸಿದೆ. ಇಬ್ಬರ ಆತ್ಮಕ್ಕೆ ಶಾಂತಿ ಸಿಗಲಿ. ದುಃಖ ತಡೆಯುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

