ಮುಳ್ಳಕಟ್ಟಮ್ಮ ದೇವಸ್ಥಾನಕ್ಕೆ ಲಕ್ಷ ಅನುದಾನ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೋಕಿನ ಮಧುರೆ ಹೋಬಳಿ ಮಾರಸಂದ್ರ ಗ್ರಾಮದ ಮುಳಕಟ್ಟಮ್ಮ ದೇವಸ್ಥಾನ
  ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ 1 ಲಕ್ಷ ಅನುದಾನ ಮಂಜೂರಾತಿ ಆಗಿದ್ದು ಇಂದು 1ಲಕ್ಷ ಡಿಡಿ ಯನ್ನ ದೇವಾಲಯದ ಜೀರ್ಣೋದ್ದಾರ  ಸಮಿತಿಗೆ ನೀಡಲಾಯಿತು. 

 ದೊಡ್ಡಬಳ್ಳಾಪುರ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನಾಧಿಕಾರಿ ಸುಧಾ ಭಾಸ್ಕರ್ ನಾಯಕ್ ರವರು 1 ಲಕ್ಷದ ಡಿಡಿ ಯನ್ನು ದೇವಾಲಯ ಸಮಿತಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆಂಪಹನುಮಯ್ಯ, ಗ್ರಾಂಪಂ ಸದಸ್ಯರಾದ ಶೋಭಾ ಕೃಷ್ಣಮೂರ್ತಿ, ವಲಯದ ಮೇಲ್ವಿಚಾರಕಿ ಗಿರಿಜಾ, ದೇವಸ್ಥಾನದ ಅರ್ಚಕರು, ಸಮಿತಿ ಸದಸ್ಯರು, ಸೇವಾ ಪ್ರತಿನಿಧಿ ದೇವಿಕಾ, ಸಂಘದ ಸದಸ್ಯರು ಹಾಗೂ ಸಾರ್ವಜನಿಕರು  ಹಾಜರಿದ್ದರು.

 

Share This Article
error: Content is protected !!
";