ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಾರಸಂದ್ರದ ಶ್ರೀ ಕೊಂಡದಮ್ಮ (ಈರ ಮಾಸ್ತಮ್ಮ) ಸೇವಾ ಸಮಿತಿ ಯಿಂದ 15 ನೇ ವರ್ಷದ ಕಾರ್ತಿಕ ಮಾಸದ ನಾಲ್ಕು ಸೋಮವಾರ ವಿಶೇಷ ಪೂಜೆ ಮತ್ತು ಲಕ್ಷ ದೀಪೋತ್ಸವದ ಕಾರ್ಯಕ್ರಮವನ್ನು ಅ ಯೋಜನೆ ಮಾಡಲಾಗಿತ್ತು.
ಕಾರ್ತಿಕ ಮಾಸವು ಧಾರ್ಮಿಕ ಆಚರಣೆಗಳಿಗೆ ವಿಶೇಷ ಮಹತ್ವದ ಮಾಸವಾಗಿದ್ದು ಈ ಸಮಯದಲ್ಲಿ ಮಾಡುವ ಸ್ನಾನ ದೀಪಾರಾಧನೆ ದಾನ ಮೋಕ್ಷ ಸುಭಿಕ್ಷತೆ ಮತ್ತು ಆರೋಗ್ಯ ಲಭಿಸುತ್ತದೆ ಎಂಬುದು ಜನ ನಂಬಿಕೆ.ಈ ಮಾಸದಲ್ಲಿ ಶಿವ ಮತ್ತು ವಿಷ್ಣುವಿಗೆ ಪ್ರಿಯವಾಗಿದ್ದು ಈ ತಿಂಗಳಿನಲ್ಲಿ ತುಳಿಸಿ ಪೂಜೆ ಅರಳಿ ಮರದ ಪೂಜೆ ಗಂಗಾ ಸ್ನಾನದ ಮತ್ತು ದೀಪ ದಾನವು ಅತ್ಯಂತ ಪುಣ್ಯ ದಾಯಕವಾದ ತಿಂಗಳು ಎಂದು ಪರಿಗಣಿಸಲಾಗುವುದು ಎಂದು ದೇವಾಲಯದ ಅರ್ಚಕರು ತಿಳಿಸಿದರು.
ಶ್ರೀ ಕೊಂಡದಮ್ಮ ಈರಮಾಸ್ತಮ್ಮ ತಾಯಿಗೆ ವಿಶೇಷ ಹೂವಿನ ಅಲಂಕಾರ ರಾತ್ರಿ 7-00 ಗಂಟೆಗೆ ಪೂಜೆ ಲಕ್ಷದೀಪೋತ್ಸವ ಬೆಳಗಿಸುವ ಕಾರ್ಯಕ್ರಮ ಮತ್ತು ಭಕ್ತಾದಿಗಳಿಗೆ ಕಾಳು ಹುಳಿ ಮುದ್ದೆ ಊಟದ ಪ್ರಸಾದ ವಿನಿಯೋಗ
ವ್ಯವಸ್ಥೆ ಮಾಡಲಾಗಿತ್ತು. ದೇವಾಲಯಕ್ಕೆ ಬಂದ ಭಕ್ತರು ದೀಪೋತ್ಸವ ದಲ್ಲಿ ಬಾಗವಹಿಸಿ ದೀಪಗಳನ್ನು ಹಚ್ಚಿ ಧನ್ಯತೆ ಮೆರೆದರು.
ಈ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾರಸಂದ್ರ ಗ್ರಾಮಸ್ಥರು ಸೇರಿದಂತೆ ಮಧುರೆ ಹೋಬಳಿಯ ಗ್ರಾಮಸ್ಥರು ಶ್ರೀ ಕೊಂಡದಮ್ಮ (ಈರಮಾಸ್ತಮ್ಮ) ಸೇವಾಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

