ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಚನ ಭ್ರಷ್ಟ ಸಿದ್ದರಾಮಯ್ಯ ನವರೇ, ನಿಗದಿತ ವೇತನ, ಬಾಕಿ ಪ್ರೋತ್ಸಾಹ ಧನ ನೀಡುವಂತೆ ಆಗ್ರಹಿಸಿ ಸಾವಿರಾರು ಆಶಾ ಕಾರ್ಯಕರ್ತೆಯರು ಕಳೆದ 4 ದಿನಗಳಿಂದ ಕೊರೆಯುವ ಚಳಿಯಲ್ಲಿಯೇ ರಾತ್ರಿ ಮಲಗಿ ಅನಿರ್ದಿಷ್ಟಾವಾಧಿ ಪ್ರತಿಭಟನೆ ಮುಂದವರಿಸಿದ್ದಾರೆ.
ಕರುಣೆ ಇಲ್ಲದ ಕಟುಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತಿಲ್ಲ. ಮುಷ್ಕರದಿಂದ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ತೊಂದರೆ ಆಗುತ್ತಿದೆ. ಈಗ ನಿಮಗೆ ಕಣ್ಣೀರು ಬರುವುದಿಲ್ಲವೇ ? ಲಕ್ಷ್ಮೀ ಹೆಬ್ಬಾಳ್ಕರ್ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ತಾವು ಮಹಿಳೆಯರ ಕಷ್ಟಗಳನ್ನು ಆಲಿಸದ ಮೇಲೆ ಆ ಸ್ಥಾನದಲ್ಲಿದ್ದು ಏನು ಪ್ರಯೋಜನ ? ನಿಮ್ಮ ಆತ್ಮಸಾಕ್ಷಿಯನ್ನು ಕಲ್ಲು ಬಂಡೆಯಂತೆಯೇ ಗಟ್ಟಿಮಾಡಿಕೊಂಡಿದ್ದೀರಿ.! ಎಂದು ಜೆಡಿಎಸ್ ವ್ಯಂಗ್ಯವಾಡಿದೆ.