ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಪ್ರಭಾರ ಅಧ್ಯಕ್ಷರಾಗಿ ಕಂಚಿಗನಾಳ ಲಕ್ಷ್ಮೀನಾರಾಯಣ ಆಯ್ಕೆಯಾಗಿದ್ದಾರೆ
ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಅಧ್ಯಕ್ಷರಾಗಿದ್ದ ಮಾರೇಗೌಡ ರವರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಬಾಕಿ ಇರುವುದರಿಂದ ಪ್ರಭಾರ ಅಧ್ಯಕ್ಷರಾಗಿ ಕಂಚಿಗನಾಳ ಲಕ್ಷ್ಮೀನಾರಾಯಣ್ ರವರನ್ನು ಮುಂದಿನ ಚುನಾವಣೆ ಪ್ರಕ್ರಿಯೆ ವರೆವಿಗೂ ಪ್ರಭಾರ ಅಧ್ಯಕ್ಷರಾಗಿ ಅಯ್ಕೆ ಮಾಡಲಾಗಿದೆ.
ನೂತನ ಪ್ರಭಾರ ಅಧ್ಯಕ್ಷರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ. ವಿಜಯ್ ಕುಮಾರ್,
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕುರುವಗೆರೆ ನರಸಿಂಹಯ್ಯ, ನಿಕಟ ಪೂರ್ವ ಸದಸ್ಯ ಹಾಡೋನಹಳ್ಳಿ ಅಪ್ಪಯ್ಯಣ್ಣ, ದೊಡ್ಡಬಳ್ಳಾಪುರ ಜೆಡಿಎಸ್ ಅಧ್ಯಕ್ಷ ಲಕ್ಷ್ಮೀಪತಿ, ವಕೀಲ ಮುರಳೀಧರ್, ನಗರ ಸಭಾ ಸದಸ್ಯ ಪದ್ಮನಾಭ, ಜೆಡಿಎಸ್ ವಕ್ತಾರ ಕುಂಟನಹಳ್ಳಿ ಮಂಜುನಾಥ, ಮುಖಂಡರಾದ ತಿರುಮಗೊಂಡನಹಳ್ಳಿ ಆಶೋಕ್, ಸುಣ್ಣಘಟ್ಟಹಳ್ಳಿ ಮಂಜಣ್ಣ, ಕೊನಘಟ್ಟ ಆನಂದ್, ಕುರುವಗೆರೆ ಮುರಳೀಧರ್, ಅಂತರ ಹಳ್ಳಿ ಆನಂದ್, ಮೆಳೆಕೋಟೆ ಕ್ರಾಸ್ ಕೆಂಪೇಗೌಡ, ಮಂಜುನಾಥ್ ಅಭಿನಂದನೆ ಸಲ್ಲಿಸಿದರು.