ಅನ್ನದಾನ ಮಾಡುವ ಮೂಲಕ ನಿರ್ಗತಿಕ ಬಡವರೊಂದಿಗೆ ವಿಶೇಷ ದಿನ ಆಚರಿಸಿ-ಲಕ್ಷ್ಮೀಪತಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾವಿರಾರು ನಿರ್ಗತಿಕರ ದಿನ ನಿತ್ಯದ ಬದುಕಿಗೆ ನಿರಂತರ ಅನ್ನ ದಾಸೋಹ ಆಧಾರವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಸಿದವರಿಗೆ ಆಹಾರ ವಿತರಣೆ ಮಾಡಿರುವುದು ಸಂತಸತಂದಿದೆ ಎಂದು ನಟ, ನಿರ್ಮಾಪಕ ಲಕ್ಷ್ಮೀಪತಿ ತಿಳಿಸಿದರು.

1949 ನೇ ದಿನದ ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಅವರು ನಂತರ ಮಧ್ಯಮಗಳೊಂದಿಗೆ ಮಾತನಾಡಿದರು ದಾನಗಳಲ್ಲೇ ಶ್ರೇಷ್ಠವಾದ ಅನ್ನದಾನವನ್ನು ಕಳೆದ 5 ವರ್ಷಗಳಿಂದ ನಿರಂತರವಾಗಿ ಮಲ್ಲೇಶ್ ಮತ್ತು ತಂಡ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನೆಡೆಸಿಕೊಂಡು ಬರುತ್ತಿದೆ.

- Advertisement - 

ಇಲ್ಲಿ ಪ್ರತಿ ನಿತ್ಯ ನೂರಾರು ಬಡ ಹಾಗೂ ನಿರಾಶ್ರಿತರಿಗೆ ಆಹಾರ ವಿತರಣೆಯಾಗುತ್ತಿದ್ದು, ಈ ಕಾರ್ಯಕ್ರಮ ಕೇವಲ ಅನ್ನದಾನಕ್ಕೆ ಸೀಮಿತವಾಗದೆ ಶಾಲಾ ಮಕ್ಕಳಿಗೆ ಅವಶ್ಯಕವಿರುವ ಅಗತ್ಯ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ವಿದ್ಯಾದಾನಕ್ಕೆ ಮುಂದಾಗಿರುವುದು ಶ್ಲಾಘನಿಯ ಸಂಗತಿ ಎಂದರು.

ಅನ್ನ ದಾಸೋಹದ ಜೊತೆಗೆ ಶಾಲಾಮಕ್ಕಳಿಗೆ ನೋಟ್ ಬುಕ್, ಹಾಗೂ ಪೆನ್ ವಿತರಣೆ ಮಾಡಿದರು. ಕಾರ್ಯಕ್ರಮದ ಆಯೋಜಕ ಅನ್ನ ದಾಸೋಹಿ ಮಲ್ಲೇಶ್ ಮಾತನಾಡಿ ಸದಾ ದಾನಿಗಳ ನೆರವಿಂದ ನೆಡೆಯುವ ಕಾರ್ಯಕ್ರಮ ಇದಾಗಿದ್ದು, ದಿನೇ ದಿನೇ ಇಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ,

- Advertisement - 

ಸಂಪನ್ಮೂಲದ ಕೊರತೆ ಉಂಟಾಗುತ್ತಿದ್ದೂ ಹಸಿದ ಹೊಟ್ಟೆಗಳಿಗೆ ಆಹಾರ ವಿತರಣೆ ಮಾಡಲು ದಾನಿಗಳು ಮುಂದಾಗಬೇಕಿದೆ, ನಿಮ್ಮ ಎಲ್ಲಾ ವಿಶೇಷ ದಿನಗಳನ್ನು ನಮ್ಮೊಟ್ಟಿಗೆ ಆಚರಿಸುವ ಮೂಲಕ ನಿರಾಶ್ರಿತರಿಗೆ ಕಡು ಬಡವರಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿದರು.

ಇಂದಿನ ದಾನಿಗಳಾಗಿ ನಮ್ಮ ಸಮಿತಿಯೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟ ನಿರ್ಮಾಪಕ ಸಮಾಜ ಸೇವಕ ಲಕ್ಷ್ಮೀಪತಿಯವರಿಗೆ ಒಳ್ಳೆಯದಾಗಲಿ ಅವರಿಂದ ಮತ್ತಷ್ಟು ಸಮಾಜಮುಖಿ ಕಾರ್ಯಗಳು ಹೆಚ್ಚಾಗಲಿ ಎಂದು ಶುಭಹಾರೈಸಿದರು.

 

 

Share This Article
error: Content is protected !!
";