ಭೂ ಗ್ಯಾರಂಟಿ ಯೋಜನೆ ಜಾರಿ ಬಡಜನರಿಗೆ ಹಕ್ಕುಪತ್ರ ವಿತರಣೆ- ಡಿಸಿಎಂ ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ವಿಜಯನಗರ(ಹೊಸಪೇಟೆ):
ನಮ್ಮ
ಮೇಲೆ ವಿಶ್ವಾಸ ಹಾಗೂ ನಂಬಿಕೆ ಇಟ್ಟು ರಾಜ್ಯದ ಜನತೆ 136 ಸೀಟು ಗೆಲ್ಲಿಸಿ, ಅಧಿಕಾರ ನೀಡಿದ್ದಿರಿ. 5 ಗ್ಯಾರಂಟಿಗಳನ್ನು ಈಗಾಗಲೇ ಜಾರಿ ಮಾಡಿದ್ದೇವೆ. 6ನೇಯದಾಗಿ ಭೂ ಗ್ಯಾರಂಟಿಯನ್ನು ಜಾರಿಗೊಳಿಸಿ ಬಡ ಜನರಿಗೆ ಅವರ ಸ್ವತ್ತಿನ ಹಕ್ಕುಪತ್ರಗಳನ್ನು ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳವಾರ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಪ್ರಗತಿಯತ್ತ ಕರ್ನಾಟಕಸಮರ್ಪಣೆ ಸಂಕಲ್ಪಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

- Advertisement - 

ಎರಡು ವರ್ಷ ಸಂಭ್ರಮ ಆಚರಣೆಗೆ ಕಾರ್ಯಕ್ರಮ ಆಯೋಜಿಸಿಲ್ಲ. ಬದಲಿಗೆ ರಾಜ್ಯದ ಜನತೆ ಋಣ ತೀರಿಸಲು ಬಂದಿದ್ದೇವೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿ ಇರುವರೆಗೂ 5 ಗ್ಯಾರಂಟಿಗಳನ್ನು ಮುಂದುವರಿಸುತ್ತೇವೆ. 6ನೇ ಗ್ಯಾರಂಟಿಯಾಗಿ ಆಸ್ತಿ, ಪಟ್ಟ ಇಲ್ಲದೇ, ಬಹುಕಾಲದಿಂದ ವಾಸವಿದ್ದ ಗ್ರಾಮೀಣ ಭಾಗದ ಬಡ ಜನರಿಗೆ ಅವರ ಹಕ್ಕುಪತ್ರಗಳನ್ನು ನೀಡುವ ಕಾರ್ಯ ಮಾಡಿದ್ದೇವೆ. ಮುಂದಿನಗಳಲ್ಲಿ ನಗರ ಪ್ರದೇಶದಲ್ಲಿ ವಾಸವಿರುವರಿಗೂ ಅವರ ಆಸ್ತಿ ಹಾಗೂ ಸ್ವತ್ತಿನ ಖಾತೆಗಳನ್ನು ಸರಿಪಡಿಸಿ ಸ್ವತ್ತನ್ನು ನೀಡುವ 7ನೇ ಗ್ಯಾರಂಟಿ ನೀಡಲು ಬದ್ದವಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

- Advertisement - 

ನಾವು ಅಧಿಕಾರ ಬಂದ ಮೇಲೆ ಎಲ್ಲ ವರ್ಗದ ಜನರ ಅಭಿವೃದ್ಧಿ ಬಗ್ಗೆ ಯೋಜನೆ ರೂಪಿಸಿದ್ದೇವೆ. ಭ್ರಷ್ಟಾಚಾರಕ್ಕೆ ಬೇಡಿ ಹಾಕಿದ್ದೇವೆ. ಆಡಳಿತದಲ್ಲಿ ಸುಧಾರಣೆ ತಂದಿದ್ದೇವೆ. ಇಂದಿರಾ ಗಾಂಧಿಯವರು ಜಿಲ್ಲೆಗೆ ಆಗಮಿಸಿ ವಿಜಯನಗರ ಸ್ಟೀಲ್ ಆರಂಭಿಸಿದರು. ಸೋನಿಯಾ ಗಾಂಧಿ ವಿದ್ಯುತ್ ಉತ್ಪಾದನೆ ಕಂಪನಿ ತೆರೆದು ಜಿಲ್ಲೆಗೆ ರೂ.10 ಸಾವಿರ ಕೋಟಿ ನೀಡಿದರು. ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಜ್ಯದಲ್ಲಿ ರಾಹುಲ್ ಗಾಂಧಿಯವರು ಪ್ರವಾಸ ಮಾಡಿದ ಎಲ್ಲ ಸ್ಥಳಗಳಲ್ಲೂ ಕಾಂಗ್ರೇಸ್ ಪಕ್ಷ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 6 ಕಾಂಗ್ರೇಸ್ ಪಕ್ಷದ ಸಂಸದರು ಜಯಗಳಿಸಿದ್ದಾರೆ. ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ರೂ.5000 ವಿಶೇಷ ಅನುದಾನ ನೀಡುತ್ತಿದೆ. ವಿರೋಧ ಪಕ್ಷಗಳು ಆರೋಗ್ಯಕರ ಟೀಕೆ ಟಿಪ್ಪಣಿಗಳನ್ನು ಮಾಡಿದರೆ ಒಳ್ಳೆಯದು. ಟೀಕೆಗಳು ಸಾಯುತ್ತವೆ ಆದರೆ ನಾವು ಮಾಡಿದ ಕೆಲಸಗಳು ಉಳಿಯುತ್ತವೆ. ಇದಕ್ಕೆ ಗ್ಯಾರಂಟಿ ಯೋಜನೆಗಳೇ ಸಾಕ್ಷಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.  

- Advertisement - 

ತುಂಗಭದ್ರಾ ನದಿ ಭಾಗದಲ್ಲಿನ ಜನರ ನೀರಿನ ಬಣವೆ ತೀರಿಸಿ, ನೀರಾವರಿ ಯೋಜನೆಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ತುಂಗಭದ್ರಾ ಅಣೆಕಟ್ಟೆಗೆ ಸಮನಾಂತರವಾಗಿ ನವಿಲೆ ಬಳಿ ಅಣೆಕಟ್ಟು ನಿರ್ಮಿಸಿ, 24 ಟಿ.ಎಂ.ಸಿ ನೀರನ್ನು ರಾಜ್ಯಕ್ಕೆ ಉಳಿಸಿಕೊಳ್ಳಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಆದರೆ ಇದಕ್ಕೆ ಆಂದ್ರ ಮತ್ತು ತೆಲಂಗಾಣ ಸರ್ಕಾರಗಳು ಅನುಮತಿ ನೀಡಿಲ್ಲ. ತುಂಗಭದ್ರಾ ಮಂಡಳಿಯಲ್ಲಿ ಯೋಜನೆ ಪ್ರಸ್ತಾವ ಇರಿಸಿಸಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿಗೆ ಒತ್ತು ನೀಡಿದ್ದು, ಗ್ಲೋಬಲ್ ಇನ್ವೆಸ್ಟರ್  ಮೀಟ್ನಲ್ಲಿ ರೂ.10,000 ಕೋಟಿ ಬಂಡವಾಳ ಹೂಡಲು ಉದ್ದಿಮೆದಾರರು ಮುಂದೆ ಬಂದಿದ್ದಾರೆ. ಉದ್ಯೋಗ ಸೃಜನೆ ಆದ್ಯತೆ ನೀಡಿದ್ದೇವೆ.

ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಗ್ರಾಮೀಣ ಫಥಎನ್ನುವ ಯೋಜನೆ ರೂಪಿಸಲಾಗಿದೆ. ಇದೇ ರೀತಿಯಲ್ಲಿ ಪ್ರವಾಸೋದ್ಯಮ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಜನರಿಗೆ ಒಳಿತಾಗುವ ಅಭಿವೃದ್ದಿ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ.

ರಾಜ್ಯ ಸರ್ಕಾರ ನುಡಿದಂತೆ ನಡೆದು ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಹಕ್ಕುಪತ್ರ ನೀಡಲು ಶ್ರಮಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಎಲ್ಲಾ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

 

Share This Article
error: Content is protected !!
";