ವಕ್ಫ್‌ ಮಂಡಳಿಯ ಹೆಸರಿನಲ್ಲಿ ಕಾಂಗ್ರೆಸ್ ನಡೆಸುತ್ತಿದ್ದ ಲ್ಯಾಂಡ್‌ ಜಿಹಾದ್‌ಗೆ ಕಡಿವಾಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಲವಾರು ದಶಕಗಳಿಂದ ಭಾರತೀಯ ಕಾಂಗ್ರೆಸ್
ಪಕ್ಷವು ವಕ್ಫ್‌ಮಂಡಳಿಯ ಹೆಸರಿನಲ್ಲಿ ನಡೆಸುತ್ತಿದ್ದ ಲ್ಯಾಂಡ್‌ಜಿಹಾದ್‌ಗೆ ದೇಶದ ಸಂಸತ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ದೇಶದ ಪ್ರಜಾಪ್ರಭುತ್ವದ ದೇಗುಲದಲ್ಲಿ ನಿರಂತರ 14 ಗಂಟೆಗಳ ಚರ್ಚೆಯ ಬಳಿಕ ವಕ್ಫ್‌ತಿದ್ದುಪಡಿ ಮಸೂದೆಗೆ ಸಂಸದರು ಒಪ್ಪಿಗೆ ನೀಡಿದ್ದಾರೆ.

ಲ್ಯಾಂಡ್‌ಜಿಹಾದ್‌ನ ಪರವಾಗಿದ್ದ ಇಂಡಿ ಮೈತ್ರಿಕೂಟ ಎಂದಿನಂತೆ ವಿರೋಧ ವ್ಯಕ್ತಪಡಿಸಿದರೂ ಎನ್‌ಡಿಎ ಸಂಖ್ಯಾಬಲದ ಮುಂದೆ ಯಾವುದೇ ಆಟ ನಡೆಯಲಿಲ್ಲ.

ಭಾರತೀಯ ಸೇನೆ, ಭಾರತೀಯ ರೈಲ್ವೆ ಬಳಿಕ ಅತಿಹೆಚ್ಚು ಭೂಮಿ ಹೊಂದಿದ್ದ ವಕ್ಫ್‌ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದೇಶವಿರೋಧಿ ನೀತಿಗಳನ್ನು ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ತಿದ್ದುಪಡಿ ಮಾಡಿದೆ.

ವಕ್ಫ್‌ಮಂಡಳಿಯ ಬಹುತೇಕ ಆಸ್ತಿಗಳು ಕಾಂಗ್ರೆಸ್‌ಮತ್ತು ಕಾಂಗ್ರೆಸ್‌ನಾಯಕರ ಕಪಿಮುಷ್ಠಿಯಲ್ಲಿದ್ದು, ಇದರಿಂದ ಮುಸ್ಲಿಂ ಸಮುದಾಯಕ್ಕೂ ಯಾವುದೇ ಲಾಭ ಇರಲಿಲ್ಲ. ವಕ್ಫ್‌ಮಂಡಳಿಯು ಯಾವುದೇ ರೀತಿಯ ಜನಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳದೆ ಬರೀ ಭೂಮಿ ನುಂಗುವ ಕಾಯಕದಲ್ಲಿ ತೊಡಗಿಸಿಕೊಂಡಿತ್ತು, ಇದೆಲ್ಲದಕ್ಕೂ ಲೋಕಸಭೆ ಅಂತ್ಯ ಹಾಡಿದೆ ಎಂದು ಬಿಜೆಪಿ ಹರ್ಷ ವ್ಯಕ್ತಪಡಿಸಿದೆ.

 

Share This Article
error: Content is protected !!
";