ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಪಶು ಆಸ್ಪತ್ರೆಯಲ್ಲಿ 40 ಲಕ್ಷದ ವೆಚ್ಚದಲ್ಲಿ ನೂತನ ಪಾಲಿ ಹೌಸ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಪಾಲಿ ಹೌಸ್ ನಿರ್ಮಾಣದಿಂದ ಸ್ಥಳೀಯ ರೈತರು ಮತ್ತು ಪಶುಪಾಲಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗಲಿದ್ದು, ಪಶು ಸಂವರ್ಧನೆಗೆ ಇದು ಮಹತ್ವದ ಹೆಜ್ಜೆಯಾಗಲಿದೆ. ರೈತರ ಮತ್ತು ಜನರ ತಾಲೂಕಿನ ಅಭಿವೃದ್ಧಿಯತ್ತ ನನ್ನ ಹೆಜ್ಜೆ ಎಂದರು.
ಉಪನಿರ್ದೇಶಕ ಎನ್ ಕುಮಾರ, ಸಹಾಯಕ ನಿರ್ದೇಶಕ ಡಾ.ಮಹಮ್ಮದ್ ಹುಸೇನ್, ನಗರಸಭೆ ಅಧ್ಯಕ್ಷ ಬಾಲಕೃಷ್ಣ, ನಗರಸಭೆ ಸದಸ್ಯ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯರು ಶಿವರಂಜನಿ ಯಾದವ್, ನಗರಸಭೆ ಸದಸ್ಯ ಜಗದೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೆ ರಮೇಶ್, ನಗರ ಸಭೆ ಸದಸ್ಯ ವಿ ಶಿವಕುಮಾರ್, ಜ್ಞಾನೇಶ್, ಯಲ್ಲದಕೆರೆ ಮಂಜುನಾಥ ಇದ್ದರು.