ಲಾರ್ವಾ ಮತ್ತು ಸೊಳ್ಳೆ ಮುಕ್ತ  ಶಾಲೆ ಸಮುದಾಯಕ್ಕೆ ಆದರ್ಶನೀಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಲಾರ್ವಾ ಮತ್ತು ಸೊಳ್ಳೆ ಮುಕ್ತ ಶಾಲೆ ಸಮುದಾಯಕ್ಕೆ ಆದರ್ಶನೀಯ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ರಂಗಾರೆಡ್ಡಿ ಹೇಳಿದರು.

ಇಲ್ಲಿನ ಮಾರುತಿ ನಗರದ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಗುಮಾಸ್ತರ ಕಾಲೋನಿಯ ಶರಣ ಬಸವೇಶ್ವರ ಶಾಲೆಯಲ್ಲಿ ಬುಧವಾರ ಲಾರ್ವಾ ಮುಕ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡೆಂಗ್ಯೂ, ಚಿಕನ್‍ಗುಣ್ಯಾ, ಇತರೆ ಕೀಟಜನ್ಯ ರೋಗಗಳು ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮುಂಗಾರು ಪ್ರಾರಂಭದಲ್ಲಿ ಶಾಲೆಯ ಸುತಮುತ್ತ ಪರಿಸರ ಸ್ನೇಹಿ ವಾಯವಾರಣ ಇಟ್ಟುಕೊಳ್ಳಬೇಕು. ಶಾಲೆಗಳ ಆವರಣದಲ್ಲಿ ಫನತ್ಯಾಜ್ಯ ವಸ್ತುಗಳು ಬಿಸಾಕದಂತೆ, ಶಾಲೆಯ ಎಲ್ಲಾ ಕೊಠಡಿಯಲ್ಲಿ ಸ್ವಚ್ಛತೆ ಇರುವಂತೆ ಶಿಕ್ಷಕರು ವಿದ್ಯಾರ್ಥಿಗಳು ನೋಡಿಕೊಳ್ಳುವ ಮನೋಭಾವನೆ ಬೆಳಸಿಕೊಳ್ಳಿ. ಪ್ರತಿ ದಿನ ಪ್ರಾರ್ಥನೆ ಸಂದರ್ಭದಲ್ಲಿ ಸೊಳ್ಳೆ ನಿಯಂತ್ರಣಾ ಜಾಗೃತಿ ಘೋಷಣೆಯನ್ನು ಮಕ್ಕಳಿಂದ ಕೂಗಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಯೋಗೇಶ್ವರಪ್ಪ,ರುದ್ರಮುನಿ, ಪ್ರಾಥಮಿಕ ಆರೋಗ್ಯ ಸುರಕ್ಷತ ಅಧಿಕಾರಿಗಳಾದ ರೂಪ, ಪವಿತ್ರ, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.

 

Share This Article
error: Content is protected !!
";