ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ನೀವು ಜನಪ್ರತಿನಿಧಿಯೋ ? ಬೀದಿ ರೌಡಿಯೋ ? ಎಂದು ಜೆಡಿಎಸಿ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಕರ್ನಾಟಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು, ನೀವು ಶಾಸಕರಾಗಲು ದಲಿತರ ಮತಗಳು ಬೇಕು. ಆದರೆ, ನೀವು ಮಾಡುತ್ತಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಪ್ರಶ್ನಿಸಿದರೇ ಕೊಲೆ ಬೆದರಿಕೆ ಹಾಕುತ್ತೀರಾ? ರೌಡಿಗಳನ್ನು ಬಿಟ್ಟು ದಲಿತ ನಾಯಕರ ಮೇಲೆ ಹಲ್ಲೆ , ದೌರ್ಜನ್ಯ , ದಬ್ಬಾಳಿಕೆ ನಡೆಸುತ್ತಿದ್ದೀರಾ ಎಂದು ಜೆಡಿಎಸ್ ಹರಿಹಾಯ್ದಿದೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿದರೆ ನಿಮಗೇನು ಸಮಸ್ಯೆ? ದಲಿತ ನಾಯಕರ ಮೇಲೆ ನಿಮಗೇಕೆ ದ್ವೇಷ ? ಕಾಂಗ್ರೆಸ್‌ಸೇಡಿನ ರಾಜಕಾರಣ, ಇಂತಹ ಹಲ್ಲೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಎಚ್ಚರಿಸಿದೆ.
ಗೃಹ ಸಚಿವರಾದ ಡಾ.ಜಿ ಪರಮೇಶ್ವರ ಅವರು, ದಲಿತ ಮುಖಂಡರ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮತ್ತು ಅವರ ಬೆಂಬಲಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.