ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕಥೆ, ಕಾದಂಬರಿ, ಕವನಗಳು ಸಮಾಜ ಸುಧಾರಣೆಯಾಗುವಂತ ಸಂದೇಶಗಳನ್ನು ನೀಡಬೇಕೆಂದು ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‌ವುಲ್ಲಾ ತಿಳಿಸಿದರು.
ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ, ಗಾನಯೋಗಿ ಸಂಗೀತ ಬಳಗದಿಂದ ಪತ್ರಕರ್ತರ ಭವನದಲ್ಲಿ ಗಿರೀಶ್ ಎಸ್.ಸಿ.(ರಾಗಿ) ರವರ ರಾಗಿ ತೆನೆ ಪುಸ್ತಕ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಭಾನು ಮುಷ್ತಾಕ್‌ರವರ ಬರವಣಿಗೆ ಕಡೆ ಇಡಿ ವಿಶ್ವವೇ ತಿರುಗಿ ನೋಡುವಂತಾಗಿರುವುದರಿಂದ ಬುಕರ್ ಪ್ರಶಸ್ತಿ ಸಿಕ್ಕಿತು. ದೇಶದ ಸ್ವಾತಂತ್ರಕ್ಕಾಗಿ ಅನೇಕ ಪತ್ರಿಕೆಗಳು ಬರವಣಿಗೆ ಮೂಲಕ ಬ್ರಿಟೀಷರ ವಿರುದ್ದ ಹೋರಾಡಿರುವ ಉದಾಹರಣೆಗಳಿವೆ. ಬರಹಗಾರರ ಮೇಲೆ ಸಮಾಜ ಸುಧಾರಣೆಯ ಜವಾಬ್ದಾರಿಯಿದೆ.
ಪೋಕ್ಸೋ, ರೇಪ್ ಕೇಸ್ ಇವುಗಳು ಕಡಿಮೆಯಾಗಬೇಕಾದರೆ ಸಮಾಜ ಸುಧಾರಕರು, ಲೇಖಕರ ಪಾತ್ರ ಮುಖ್ಯ. ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಎಲ್ಲರೂ ಮೊಬೈಲ್, ವಾಟ್ಸ್‌ಪ್, ಫೇಸ್‌ಬುಕ್‌ಗಳ ಹಿಂದೆ ಬಿದ್ದಿರುವುದರಿಂದ ಕಥೆ, ಕವನ, ಕಾದಂಬರಿಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ ಎಂದು ವಿಷಾಧಿಸಿದರು.
ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಶಫಿವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆರುಂಡಿ ಶ್ರೀನಿವಾಸಮೂರ್ತಿ, ಶಿಕ್ಷಕಿ ಸೌಭಾಗ್ಯಲಕ್ಷ್ಮಿ ಟಿ. ಸಂಗೀತ ಶಿಕ್ಷಕಿ ಕೋಕಿಲ ರುದ್ರಮೂರ್ತಿ, ಗಿರೀಶ್ ಎಸ್.ಸಿ., (ರಾಗಿ) ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ದಯಾ ಪುತ್ತೂರ್ಕರ್ ಇವರುಗಳು ವೇದಿಕೆಯಲ್ಲಿದ್ದರು.

