ಕುಷ್ಠ ರೋಗ ಭಯ ಬಿಟ್ಟು, ತಪಾಸಣೆಗೆ ಬನ್ನಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕುಷ್ಠರೋಗದ ಬಗ್ಗೆ ಭಯ, ಸಾಮಾಜಿಕ ಕಳಂಕ ಬಿಟ್ಟು, ತಪಾಸಣೆಗೆ, ಚಿಕಿತ್ಸೆ ನೀಡಲು ಸಹಕರಿಸಿ ಎಂದು ಚಿತ್ರದುರ್ಗ ತಾಲ್ಲೂಕಿನ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.

ಚಿತ್ರದುರ್ಗ ನಗರದ ಎಲ್ಲಾ ವಾರ್ಡ್ಗಳಲ್ಲಿ ಕುಷ್ಠರೋಗ ಪ್ರಕರಣ ಪತ್ತೆ ಆಂದೋಲನ ಮನೆ ಮನೆ ಭೇಟಿ, ಮಾಹಿತಿ ಶಿಕ್ಷಣ, ಕುಷ್ಠರೋಗ ಲಕ್ಷಣ ಪತ್ತೆಹಚ್ಚುವಿಕೆ ಕಾರ್ಯಕ್ರಮವು ನಡೆಯುತ್ತಿದ್ದು, ಸೋಮವಾರ ತಾಲ್ಲೂಕು ಆರೋಗ್ಯ ಅಧಿಕಾರಿಗಳ ತಂಡ ವಿವಿಧಡೆ ಪರಿಶೀಲನೆ ಭೇಟಿ ನಡೆಸಿ ಮನೆಗಳಲ್ಲಿ ಅಂತರ್ ವೈಯಕ್ತಿಕ ಸಮಾಲೋಚನೆ, ಅಲ್ಲಲ್ಲಿ ಗುಂಪು ಸಭೆಗಳನ್ನು ನಡೆಸಿ ಮಾಹಿತಿ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದ ಭೀಮಪ್ಪ ನಾಯಕ ಪ್ರೌಢಶಾಲೆ ರಸ್ತೆಯಲ್ಲಿ ಗುಂಪು ಸಭೆಯಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಇದು ದೀರ್ಘಕಾಲ ಖಾಯಿಲೆಯಾಗಿದ್ದು, ಬ್ಯಾಕ್ಟಿರೀಯಾಗಳಾದ ಮೈಕೋಬ್ಯಾಕ್ಟೀರಿಯಂ ಲೆಪ್ರೆಯಿ ಮತ್ತು ಮೈಕೋಬ್ಯಾಕ್ಟೀರಿಯಂ ಲೆಪೆÇ್ರೀಮತೊಸಿಸ್ದಿಂದ ಬರುವ ಖಾಯಿಲೆಯಾಗಿದ್ದು,

ಚರ್ಮದ ಬಾಧೆ ಇದರ ಪ್ರಾಥಮಿಕ ಬಾಹ್ಯ ಚಿಹ್ನೆ. ಕುಷ್ಠರೋಗ ಗುಣಪಡಿಸಿಕೊಳ್ಳದಿದ್ದಲ್ಲಿ, ಅದು ಅಭಿವೃದ್ಧಿಗೊಳ್ಳುತ್ತ ಹೋಗಿ ಚರ್ಮಕ್ಕೆ, ನರಗಳಿಗೆ, ಕಾಲುಗಳಿಗೆ ಮತ್ತು ಕಣ್ಣುಗಳಿಗೆ ಶಾಶ್ವತ ಹಾನಿ ಉಂಟು ಮಾಡುತ್ತದೆ ಎಂದು ತಿಳಿಸಿದ ಅವರು, ಶೀಘ್ರ ಪತ್ತೆ ಬಹುವಿಧ ಚಿಕಿತ್ಸೆಯಿಂದ ಕುಷ್ಟರೋಗ ಸಂಪೂರ್ಣ ಗುಣಮುಖವಾಗುತ್ತದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಜಾನಕಿ ಮಾತನಾಡಿ. ಇದೇ .04 ರಿಂದ 21 ರವರೆಗೆ ಮನೆ ಮನೆ ಭೇಟಿ ಕುಷ್ಠರೋಗದ ಬಗ್ಗೆ ಮಾಹಿತಿ ಶಿಕ್ಷಣ ರೋಗ ತಪಾಸಣೆ ಮಾಡಲು ನಿಮ್ಮ ನಿಮ್ಮ ಮನೆಗಳಿಗೆ ಆಶಾ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಆರೋಗ್ಯ ನಿರೀಕ್ಷಣಾಧಿಕಾರಿಗಳು ಭೇಟಿ ನೀಡುತ್ತಾರೆ.

ಸಂದರ್ಭದಲ್ಲಿ ಸಾರ್ವಜನಿಕರು ತಪ್ಪದೇ ಸಹಕರಿಸಿ ತಪಾಸಣೆ ಮಾಡಿಸಿಕೊಳ್ಳಿ. ಶಂಕಿತ ಪ್ರಕರಣಗಳ ಪಟ್ಟಿಯನ್ನು ಮಾಡಿ ತಜ್ಞರಿಂದ ಮರು ತಪಾಸಣೆ ನಡೆಸಿ ಕುಷ್ಠರೋಗದ ಖಚಿತತೆ ಪಡಿಸಿಕೊಂಡ ನಂತರ ಬಹು ವಿಧ ಚಿಕಿತ್ಸಾ ವಿಧಾನಕ್ಕೆ ಒಳಪಡಿಸಲಾಗುತ್ತದೆ.

ತಪಾಸಣೆ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ. ತಮ್ಮ ಮನೆ ಮನೆಗೆ ಬರುವ ಆಶಾ ಕಾರ್ಯಕರ್ತೆಯರಿಗೆ ಯಾವುದೇ ಗೌಪ್ಯತೆ ಮಾಡದೆ ಸಂಪೂರ್ಣ ಮಾಹಿತಿ ನೀಡಿ ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಿ ಎಂದರು.

 ಗುಂಪು ಸಭೆಯಲ್ಲಿ ಆರೋಗ್ಯ ಸುರಕ್ಷತಾ ಅಧಿಕಾರಿ ಗೀತಮ್ಮ, ಆಶಾ ಕಾರ್ಯಕರ್ತೆ ಅನುರಾಧ, ಸ್ಥಳೀಯ ಕುಟುಂಬಸ್ಥರು ಭಾಗವಹಿಸಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";