ಕಮಲ್ ಹಾಸನ್‌ ಅಭಿನಯದ ಥಗ್ ಲೈಫ್ ಗೆ ಕಾನೂನಾತ್ಮಕ ಕ್ರಮ-ಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಟ ಕಮಲ್ ಹಾಸನ್‌ ಅಭಿನಯದ
ಥಗ್ ಲೈಫ್ಚಿತ್ರದ ಮೇಲೆ ಬ್ಯಾನ್ ತೂಗುಗತ್ತಿ ನೇತಾಡುತ್ತಿದೆ.
ತಮಿಳಿಂದ ಕನ್ನಡ ಹುಟ್ಟಿದೆ ಅಂತ ಕಮಲ್ ಹಾಸನ್ ಹೇಳಿಕೆ ನೀಡಿದ್ದರಿಂದಾಗಿ ವಿವಾಹ ಹುಟ್ಟಿಕೊಂಡಿದ್ದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

- Advertisement - 

ಸದ್ಯ ಈ ವಿಚಾರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದು, ಕರ್ನಾಟಕದಲ್ಲಿ ಥಗ್ ಲೈಫ್ಸಿನಿಮಾ ಬಿಡುಗಡೆ ಮಾಡದಿರಲು ಮನವಿ ಮಾಡಿದ್ದಾರೆ.

- Advertisement - 

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಯೋಗದೊಂದಿಗೆ ಮಾತನಾಡಿ ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಸಹಕಾರ ನೀಡುತ್ತೆ ಎಂದು ಭರವಸೆ ನೀಡಿದರು.

ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ಜೂನ್ 5ಕ್ಕೆ ಎಲ್ಲೆಡೆ ರಿಲೀಸ್ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಸಿನಿಮಾ ರಿಲೀಸ್​ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಸದ್ಯ ಕಾನೂನಿನಲ್ಲಿ ಸಿನಿಮಾ ನಿಷೇಧಿಸಲು ಅವಕಾಶ ಇಲ್ಲದಿರುವ ಹಿನ್ನೆಲೆ ಚಲನಚಿತ್ರ ವಾಣಿಜ್ಯ ಮಂಡಳಿ ರಾಜ್ಯ ಸರ್ಕಾರದ ಬೆಂಬಲ ಕೋರಿದೆ. ಅಲ್ಲದೆ ಈ ಕುರಿತು ಚಿತ್ರ ತಂಡ ಕೂಡ ಕೋರ್ಟ್ ಮೆಟ್ಟಿಲು ಏರಿದೆ.

- Advertisement - 

 

Share This Article
error: Content is protected !!
";