ಕುರಿ ಹಟ್ಟಿಗೆ ಚಿರತೆಗಳ ದಾಳಿ, 30ಕ್ಕೂ ಹೆಚ್ಚು ಕುರಿಗಳ ಸಾವು

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕುರಿದೊಡ್ಡಿಗೆ ಚಿರತೆಗಳು ನುಗ್ಗಿ
ಸಿಕ್ಕ ಸಿಕ್ಕ ಕುರಿಗಳ ಮೇಲೆ ದಾಳಿ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಿರಿಗೆರೆ ಕ್ರಾಸ್ ಬಳಿ ಈ ಘಟನೆ ನಡೆದಿದೆ.

ಚಿರತೆಗಳ ದಾಳಿಯಿಂದಾಗಿ 30ಕ್ಕೂ ಹೆಚ್ಚಿನ ಕುರಿಗಳು ಸಾವುಕಂಡಿವೆ. ಬೆಳಗಾವಿ ಮೂಲದ ಕುರಿಗಾಯಿ ದಿಳ್ಳೆಪ್ಪ ಎಂಬವರು ರೈತನ ಅಡಿಕೆ ತೋಟದಲ್ಲಿ ಕುರಿಗಳ ಹಟ್ಟಿ ಹಾಕಿಕೊಂಡಿದ್ದರು. ಆದರೆ, ತಡರಾತ್ರಿ ಭಾರೀ ಮಳೆ ಬಂದ ಹಿನ್ನೆಲೆಯಲ್ಲಿ ಕುರಿಗಳನ್ನ ಅಲ್ಲಿಯೇ ಬಿಟ್ಟು ಎತ್ತರದ ಸ್ಥಳಕ್ಕೆ ಹೋಗಿದ್ದರು.

- Advertisement - 

ಈ ವೇಳೆ ಎರಡ್ಮೂರು ಚಿರತೆಗಳು ಕುರಿದೊಡ್ಡಿಗೆ ನುಗ್ಗಿದ್ದು, ಸಿಕ್ಕ ಸಿಕ್ಕ ಕುರಿಗಳ ಮೇಲೆ ದಾಳಿ ಮಾಡಿವೆ. ಕುರಿಗಳನ್ನು ಅರ್ಧಂಬರ್ಧ ಕಚ್ಚಿ ತಿಂದು ಪರಾರಿಯಾಗಿವೆ. ಕುರಿಗಾಯಿಗಳು ಕಂಲಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ನಿವಾಸಿ ಸೋಮಣ್ಣ ಎಂಬುಬರಿಗೆ ಸೇರಿದ ಕುರಿಗಳು ಎಂದು ತಿಳಿದುಬಂದಿದೆ.

ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತಲಿನ ಪ್ರದೇಶದಲ್ಲಿ ಎರಡರಿಂದ ಮೂರು ಚಿರತೆಗಳ ಸುತ್ತಾಟದ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.

- Advertisement - 

 

 

 

Share This Article
error: Content is protected !!
";