ಚಂದ್ರವಳ್ಳಿ ನ್ಯೂಸ್, ಶಿರಾ:
ಶಿರಾ ತಾಲೂಕಿನ ಬರಗೂರು ಫ್ಲಾರೆನ್ಸ್ ಶಾಲೆ ಹತ್ತಿರ ಚಿರತೆಯೊಂದು ದಿಢೀರ್ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರು, ರೈತರು ಆತಂಕದಲ್ಲಿದ್ದಾರೆ. ಬರಗೂರಿನಲ್ಲಿ ಚಿರತೆ ಕಂಡ ಜನರು ಭಯಭೀತರಾಗಿರುವ ಘಟನೆ ಜರುಗಿದೆ.
ಏಕಾಏಕಿ ಚಿರತೆ ಕಾಣಿಸಿಕೊಂಡಿದ್ದು ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಂತ ರೈತರು, ಕಾರ್ಮಿಕರು, ಮಕ್ಕಳು ತಂಬಾ ಆತಂಕದಲ್ಲಿದ್ದಾರೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಭಯ ದೂರ ಮಾಡುವುದರ ಜೊತೆಯಲ್ಲಿ ಜನರಲ್ಲಿ ಆತ್ಮಸ್ಥೈರ್ಯ ತುಂಬಬೇಕಾಗಿದೆ.
ಚಿರತೆಗಳು ಕುರಿ, ಮೇಕೆ, ಕೋಳಿ ಮತ್ತು ನಾಯಿಗಳ ಮೇಲೆ ದಾಳಿ ಮಾಡಲು ಕಲ್ಲುಬಂಡೆಯ ಮೇಲೆ ಕುಳಿತು ಹೊಂಚುಹಾಕುತ್ತಿರುವುದರಿಂದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.
ಅರಣ್ಯಾಧಿಕಾರಿಗಳು ತಕ್ಷ ಣ ಚಿರತೆಗಳನ್ನು ಹಿಡಿದು ಸಾರ್ವಜನಿಕರಿಗೆ ರಕ್ಷ ಣೆ ನೀಡಬೇಕೆಂದು ಬರಗೂರಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.