ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದೊಂದಿಗೆ ಸಮಾಜ ಸೇವೆಯ ತುಡಿತ ಹೊಂದಿರುವ ಬೇತೂರು ಪಾಳ್ಯ ಜೆ.ರಾಜು ಸಮಾಜ ಸೇವೆಗೆ ಮುಂದಾಗಿ ಬಡವರ ಕಣ್ಣೀರು ಹೊರೆಸುವ ಕಾರ್ಯ ಮಾಡಲಿ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಹನುಮಂತನಾಥ ಸ್ವಾಮೀಜಿಗಳು ಕಿವಿ ಮಾತು ಹೇಳಿದರು.
ಹಿರಿಯೂರು ನಗರ ಹೊರಹೊಲಯದ ವೈಟ್ ವಾಲ್ ನಲ್ಲಿ ಗುರುವಾರ ರಾತ್ರಿ ನಡೆದ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಸ್ವಾಮೀಜಿ ಜೆ ರಾಜು ಅವರು ಸರ್ಕಾರಿ ನೌಕರಿಯಿಂದ ಮಾತ್ರ ನಿವೃತ್ತಿಯಾಗಿದ್ದಾರೆ. ಆದರೆ ಅವರು ಸಮಾಜ ಸೇವೆಯಿಂದ ನಿವೃತ್ತಿಯಾಗಿಲ್ಲ. ಅತಿಮುಖ್ಯವಾಗಿ ಉತ್ತಮ ಆರೋಗ್ಯ ಹೊಂದಿದ್ದಾರೆ. ಜನ ಸಾಮಾರನ್ನು ಪ್ರೀತಿಸುವ ಗುಣವಿದೆ.
ಸೇವಾ ಮನೋಭಾವವಿದೆ. ತನ್ನ ವೃತ್ತಿ ಜೀವನದಲ್ಲಿ ಅವರು ನೇರವಾಗಿ ಜನರ ಸಮಸ್ಯೆಗಳ ಬಗ್ಗೆ ಅರಿತಿದ್ದಾರೆ. ಇಂಥವರು ರಾಜಕೀಯ ಕ್ಷೇತ್ರದತ್ತ ಮುಖ ಮಾಡಿದರೆ ಜನ ಸಾಮಾನ್ಯರಿಗೆ ನೇರವಾಗಿ ಸಹಾಯ ಮಾಡಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಸವನಹಳ್ಳಿ ರಮೇಶ್ ಮಾತನಾಡಿ ನಿವೃತ್ತಿ ಎನ್ನುವುದು ಒಂದು ವೃತ್ತಿಯಿಂದ ವಿಶಾಲವಾದ ಪ್ರವೃತ್ತಿಯಡೆಗಿನ ಪಯಣ. ನೌಕರಿ ಎಂಬ ಚೌಕಟ್ಟಿನ ಗೆರೆ ದಾಟಿ ಸೇವೆ ಎಂಬ ವಿಶಾಲ ಪ್ರಪಂಚದಲ್ಲಿ ಭಾಗವಹಿಸಲು ವಿಫಲ ಅವಕಾಶಗಳಿವೆ. ಜನರ ಮೂಲಭೂತ ಅವಶ್ಯಕತೆಗಳಾದ ನೀರು ಆರೋಗ್ಯ ಶಿಕ್ಷಣ ರಸ್ತೆ ಇನ್ನಿತರ ಅನುಕೂಲಗಳನ್ನು ಮಾಡಿಕೊಟ್ಟರೆ ಇದಕ್ಕಿಂತ ದೊಡ್ಡ ಸೇವೆ ಬೇರೆ ಇಲ್ಲ ಎಂದು ತಿಳಿಸಿದರು.
ಬೇತೂರು ಪಾಳ್ಯದ ಡಾ.ಜೆ ರಾಜು ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ನಾನು ಉಪನ್ಯಾಸಕನಾಗಿ ಇಲಾಖೆಯ ಮುಖ್ಯಸ್ಥನಾಗಿ ಬಿಬಿಎಂಪಿಯ ಉಪ ಆಯುಕ್ತನಾಗಿ ಕೆಲಸ ಮಾಡಿದ್ದು ನನ್ನ ಸಂಪರ್ಕಕ್ಕೆ ಬಂದ ಬಹುತೇಕ ಜನರ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನನ್ನ ಪರಿಮಿತಿಯಲ್ಲಿ ಬಗೆಹರಿಸಿದ್ದೇನೆ ಎನ್ನುವ ಭಾವನೆ ಇದೆ.
ನೇರ ನುಡಿ, ದಿಟ್ಟತನದಿಂದ ಕೆಲಸ ಮಾಡಿ ನನಗೆ ಗೊತ್ತು. ಅವಕಾಶ ಇದ್ದಾಗ ನಾಲ್ಕು ಜನಕ್ಕೆ ಒಳ್ಳೆಯದು ಮಾಡೋಣ ಎನ್ನುವ ಉದ್ದೇಶದಿಂದ ಕೆಲಸ ಮಾಡಿದ್ದೇನೆ ಅದರ ಪ್ರತಿಫಲವಾಗಿ ನನ್ನ ಸ್ನೇಹಿತರು ಹಿತೈಷಿಗಳು ಅಭಿಮಾನ ಸ್ನೇಹದಿಂದ ಬಂದಿದ್ದಾರೆ ನಿಮಗೆಲ್ಲ ನಮ್ಮ ಕಡೆಯಿಂದ ಧನ್ಯವಾದಗಳು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹರಿಯಬ್ಬೆ ಬಿ.ಎಸ್.ರಘುನಾಥ್, ಎರೆನಾಡು ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಕೆ .ಟಿ. ರುದ್ರಮುನಿ, ರೈತ ಮುಖಂಡ ಎಚ್.ಆರ್. ತಿಮ್ಮಯ್ಯ, ಪ್ರೊ.ಮೈಸೂರ್ ಶಿವಣ್ಣ, ನಿವೃತ್ತ ಡಿವೈಎಸ್ಪಿ ಬಿ ರಾಮಚಂದ್ರಪ್ಪ, ಪ್ರಾಂಶುಪಾಲ ವಸಂತ್ ಕುಮಾರ್, ಕೆ.ಜಿ .ಹನುಮಂತರಾಯ,
ಕುಬೇರಪ್ಪ, ನಿವೃತ್ತ ಪ್ರಾಂಶುಪಾಲ ರಾಜಶೇಖರ್, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಮಹಮದ್ ರಫೀಕ್, ಮೈಕೆಲ್, ತಿಮ್ಮನಹಳ್ಳಿ ರಾಜು, ಬಬ್ಬೂರ್ ಕುಮಾರ್, ಕುಸುಮಾ, ವಾಣಿ ಮಹಲಿಂಗಪ್ಪ, ಭೈರೇಶ್ ಪಟೇಲ್, ಸುಧಾ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ವಿಜಯನಗರದ ತೋಟೇಶ್, ರಾಜ್ಯದ ನಾನಾ ಮೂಲಗಳಿಂದ ಬಂದಿದ್ದ ರಾಜು ಅವರ 500ಕ್ಕೂ ಹೆಚ್ಚು ಸ್ನೇಹಿತರು, ಸರ್ಕಾರಿ ಅಧಿಕಾರಿಗಳು, ರೈತರು, ಮಹಿಳೆಯರು, ಸ್ನೇಹಿತರು, ಹಿತೈಷಿಗಳು. ರಾಜು ಅವರಿಗೆ ಸನ್ಮಾನ ಮಾಡಿದರು.

