ವಿವಿ ಸಾಗರ ನೀರಿಗೆ ಕಂಟಕ, ಶಾಸಕ ಬಿ.ಜಿ ಗೋವಿಂದಪ್ಪ ಮೂಲ ದಾಖಲೆ ಓದಿಕೊಳ್ಳಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿವಿ ಸಾಗರ ಜಲಾಶಯ ಭರ್ತಿಯಾಗಿ
130 ಅಡಿ ತುಂಬಿ ಹೆಚ್ಚಾದ ನೀರು ಕೋಡಿಯ ಮೂಲಕ ವೇದಾವತಿ ನದಿ ಕೆಳ ಭಾಗದಲ್ಲಿ ನೀರು ಹರಿಯುತ್ತಿದೆ.

ವಿ ವಿ ಸಾಗರದ ಮೇಲ್ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿ ವಿವಿ ಸಾಗರಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು 14000 ಕ್ಯೂಸೆಕ್ ನೀರಿಗಿಂತ ಹೆಚ್ಚಿನ ನೀರು ಹರಿದು ಬರುತ್ತಿದೆ. ಸುಮಾರು 4 ಸಾವಿರ ಕ್ಯೂಸೆಕ್ ನೀರು ಕೋಡಿ ಮೂಲಕ ಹೊರ ಹೋಗುತ್ತಿದೆ.

- Advertisement - 

ಹೊಸದುರ್ಗ ಶಾಸಕರಾದ ಬಿ. ಜಿ. ಗೋವಿಂದಪ್ಪನವರು ವಿವಿಸಾಗರದ ನೀರಿನ ಮಟ್ಟ 130 ಅಡಿಗಿಂತ ಜಾಸ್ತಿ ಆಗಬಾರದು, ಜಲಾಶಯದ ಹಿಂದಿರುವ ಭಾಗದ ರೈತರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಅಲ್ಲಿದ್ದ ರೈತರನ್ನು ಕರೆದುಕೊಂಡು ಬಂದು ವಿ ವಿ ಸಾಗರ ಜಲಾಶಯದ ಸ್ಲೋಯಿಸ್ ಗೇಟ್ ಮೂಲಕ ನಾಲೆಗೆ ನೀರನ್ನು ಬಿಡಿಸಿ ವಿವಿ ಸಾಗರ ನೀರು ಖಾಲಿ ಮಾಡಿಸುತ್ತಿದ್ದು ವಿವಿ ಸಾಗರ ನೀರು ಸಂಗ್ರಹಣೆಗೆ ಕಂಟಕ ಎದುರಾಗಿದೆ ಎಂದು ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಹಿತರಕ್ಷಣ ಸಮಿತಿ ನಿರ್ದೇಶಕ ಶ್ರೀನಿವಾಸ್ ಕೆ ಆತಂಕ ವ್ಯಕ್ತಪಡಿಸಿದ್ದಾರೆ.

ಇದು ಅವರ ಪ್ರತಿಷ್ಠೆ. ಈ ಹಿಂದೆ ಸ್ವತಂತ್ರ ಪೂರ್ವದಲ್ಲಿ ಜಲಾಶಯ ನಿರ್ಮಿಸಬೇಕಾದ ಸಂದರ್ಭದಲ್ಲಿ ಜಲಾಶಯದಲ್ಲಿ 135 ಅಡಿ ನೀರು ತುಂಬಿದರು ಎಷ್ಟು ಜಾಗವನ್ನು ಆಕ್ರಮಿತವಾಗುತ್ತದೆಯೋ ಆ ಜಾಗವನ್ನೆಲ್ಲ ಅಂದೆ ಗುರುತಿಸಿ ಅಲ್ಲಿನ ರೈತರನ್ನು ಬೇರೆಡೆಗೆ ಸ್ಥಳಾಂತರಿಸಿರುತ್ತಾರೆ.

- Advertisement - 

ಎಚ್ ಡಿ ರೈಸ್ ಬರೆದಿರುವ ಪುಸ್ತಕದಲ್ಲಿ ಇದೆಲ್ಲವೂ ಇದೆ. ವಿವಿ ಸಾಗರದ ಜಲಾಶಯದ ಕೋಡಿಯಲ್ಲಿ 2022ರಲ್ಲಿ 6000 ಕ್ಯೂಸೆಕ್ ನೀರು ಹೊರ ಹೋಗಿದೆ. ಜಲಾಶಯದ ವ್ಯಾಪ್ತಿ ಪ್ರದೇಶ 22500 ಎಕರೆ ಎಂದು ಎಚ್ ಡಿ ರೈಸ್ ಬರೆದಿರುವ ದಾಖಲೆಗಳಿವೆ.

ಶಾಸಕರು ಅಲ್ಲಿನ ಜನರಿಗೆ ಅನಾನುಕೂಲವಾಗುತ್ತದೆ ಎಂದು ಪದೇ ಪದೇ ವಿವಿ ಸಾಗರ ಜಲಾಶಯದ ನೀರಿನ ಮಟ್ಟವನ್ನು ಯಾವುದೇ ಕಾರಣಕ್ಕೂ 130 ಅಡಿಯಿಂದ ಒಂದು ಅಡಿಯೂ ಹೆಚ್ಚಾಗಬಾರದು ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಶ್ರೀನಿವಾಸ್ ಕಿಡಿಕಾರಿದ್ದಾರೆ.

ಮೈಸೂರು ಸಂಸ್ಥಾನದ ರಾಜರು ಅಂದು ಕಟ್ಟಿದಂತಹ ಅಣೆಕಟ್ಟಿಗೆ ನಮ್ಮಲ್ಲಿರುವ ಸ್ಥಳೀಯ ಜನಪ್ರತಿನಿಧಿಗಳು ಎಂತಹ ಕಾರ್ಯಕ್ಕೆ ಕೈ ಹಾಕಿದ್ದಾರೆ. ಹೊಸದುರ್ಗ ಶಾಸಕರಾದ ಬಿ.ಜಿ.  ಗೋವಿಂದಪ್ಪನವರು ರೈತರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಹೊಸದುರ್ಗ ವ್ಯಾಪ್ತಿ ಪ್ರದೇಶದಲ್ಲಿ ಇನ್ನೊಂದು ಕೆರೆ ಕಟ್ಟಿಸಲಿ.

ಇರುವ ಕೆರೆಯ ವ್ಯಾಪ್ತಿ ಕಡಿಮೆ ಮಾಡಲು ಹೊರಟಿರುವ ಇವರು ನಿಜವಾಗಿಯೂ ಚಿತ್ರದುರ್ಗ ಜಿಲ್ಲೆಯ ಜನಪ್ರತಿನಿಧಿಗಳೇ. ಇವರಿಗೆ ಹೊಸದುರ್ಗ ಜನತೆಯ ಬಗ್ಗೆ ಮಾತ್ರ ಕಾಳಜಿ. ಶಾಸಕರು ಈ ನಿರ್ಧಾರ ಇಲ್ಲಿಗೆ ಕೈಬಿಡಬೇಕು ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಹಿತರಕ್ಷಣ ಸಮಿತಿ ನಿರ್ದೇಶಕ ಶ್ರೀನಿವಾಸ್ ಕೆ ಆಗ್ರಹ ಮಾಡಿದ್ದಾರೆ.

ಎಚ್ ಡಿ ರೈಸ್ ರ ಪ್ರಕಾರ ವಿವಿ ಸಾಗರದ ನೀರಿನ ಮಟ್ಟ 135 ಅಡಿ ತಲುಪಿದರೂ ಕೋಡಿಯಲ್ಲಿ 6000 ಕ್ಯೂಸೆಕ್ ಹೊರ ಹೋಗುತ್ತದೆ. ಒಟ್ಟಿನಲ್ಲಿ ಜಲಾಶಯದ ಹಿನ್ನೀರಿನ ವ್ಯಾಪ್ತಿಯನ್ನು ಸ್ವತಂತ್ರ ಪೂರ್ವದಲ್ಲಿ ಗುರುತಿಸಿದ್ದಾರೆ. 1933 ರಲ್ಲಿ ಜಲಾಶಯ ಒಮ್ಮೆ ತುಂಬಿದೆ. ತದನಂತರ 2022 ರಲ್ಲಿ ಮತ್ತು 2025 ರಲ್ಲಿ ಎರಡು ಬಾರಿ ಅಂದರೆ ಇಲ್ಲಿಗೆ ಜಲಾಶಯ ನಾಲ್ಕು ಬಾರಿ ತುಂಬಿದೆ.

1933 ರಿಂದ 2022ರ ವರೆಗೆ ದೀರ್ಘಕಾಲದ ವರೆಗೆ ಜಲಾಶಯ ಭರ್ತಿಯಾಗಿರುವುದಿಲ್ಲ. ಅಲ್ಲಿನ ರೈತರು ವ್ಯಾಪ್ತಿ ಪ್ರದೇಶವನ್ನು ಆಕ್ರಮಿಸಿಕೊಂಡು ತೋಟ ತುಡಿಕೆಗಳನ್ನು ಮಾಡಿ, ನಮ್ಮ ಜಮೀನುಗಳು ಮುಳುಗಡೆಯಾಗುತ್ತವೆ ಎಂದು ಬೊಬ್ಬೆ ಹೊಡೆದರೆ ಇದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿರುವ ಶ್ರೀನಿವಾಸ್ ಅವರು ಗೋವಿಂದಪ್ಪನವರು ಇದನ್ನೇ ಅಸ್ತ್ರವಾಗಿ ಇಟ್ಟುಕೊಂಡು ಕೋಡಿಯ ಮಟ್ಟ ಕಡಿಮೆ ಮಾಡುವುದು ಒಳಿತೆ. ದಯವಿಟ್ಟು ಈ ಕಾರ್ಯಕ್ಕೆ ಕೈ ಹಾಕಬೇಡಿ ಎಂದು ಶ್ರೀನಿವಾಸ್ ಮನವಿ ಮಾಡಿದ್ದಾರೆ.

 

Share This Article
error: Content is protected !!
";