ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಗುರಿಯಾಗಲಿ: ಎಂ ಸಿದ್ದೇಶ್

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್ ನಗರ ಸಭೆ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಆಚರಣೆಯ ಅಂಗವಾಗಿ ಪ್ಲಾಸ್ಟಿಕ್ ಮುಕ್ತ ಹಿರಿಯೂರು ಕಾರ್ಯಕ್ರಮ ಆಯೋಜಿಸಲಾಗಿತ್ತು ನಗರಸಭೆ ಸಭಾಂಗಣದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಲಾಯಿತು.

ನಗರ ಸಭೆ ಪೌರಾಯುಕ್ತ ಎ.ವಾಸೀಂ ಮಾತನಾಡಿ ಅಂಗಡಿ ಮಾಲೀಕರು ಹೋಟೆಲ್ ಮಾಲೀಕರು ಕಲ್ಯಾಣ ಮಂಟಪಗಳ ಮಾಲೀಕರುಗಳಿಗೆ ಈಗಾಗಲೇ ಸಾಕಷ್ಟು ಬಾರಿ ತಿಳುವಳಿಕೆ ನೀಡಲಾಗಿದೆ. 

- Advertisement - 

ದಂಡ ವಿಧಿಸಲಾಗಿದೆ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ಬಳಸಬಾರದು ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ತಹಶೀಲ್ದಾರ್ ಎಂ ಸಿದ್ದೇಶ್  ಮಾತನಾಡಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ತಿಂಡಿ ತಿನಿಸುಗಳನ್ನು ತಿಂದು ಬಿಸಾಡಿದ ಪ್ಲಾಸ್ಟಿಕ್ ಗಳನ್ನು ಹಸುಗಳು ಮತ್ತು ಮೂಕ ಪ್ರಾಣಿಗಳು ಸೇವನೆ ಮಾಡಿ ಸಾಕಷ್ಟು ಸಂಕಷ್ಟ ಅನುಭವಿಸುವುದನ್ನು ಕಂಡಿದ್ದೇವೆ ಎಂದರು.
ಪ್ಲಾಸ್ಟಿಕ್ ಉಪಯೋಗಿಸುವುದರಿಂದ ಸಾರ್ವಜನಿಕರಿಗೆ ಅನೇಕ ಕಾಯಿಲೆಗಳು ಬರುತ್ತವೆ ಎಂದರು. 

- Advertisement - 

ರೈತ ಮುಖಂಡ ರಮೇಶ್ ಮಾತನಾಡಿ ಪ್ರವಾಸಿಗರು ಸಾಕಷ್ಟು ಜನ ಬರುತ್ತಿದ್ದು ಹೋಟೆಲ್ ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಸ್ಟೀಲ್ ತಟ್ಟೆಗಳು ಮತ್ತು ಅಡಿಕೆ ಪಟ್ಟೆಗಳನ್ನು ಬಾಳೆ ಎಲೆ ಗಳನ್ನು ಉಪಯೋಗಿಸಿ ಸಾರ್ವಜನಿಕರ ಆರೋಗ್ಯ ಕಾಪಾಡಿ ಎಂದರು ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಬಿಇಒ ಸಿಎಂ ತಿಪ್ಪೇಸ್ವಾಮಿ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಎಂ. ಡಿ ಸಣ್ಣಪ್ಪ, ಮಮತಾ, ವಿಠಲ್ ಪಾಂಡುರಂಗ ಮತ್ತಿತರರು ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶಿವಕುಮಾರ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ ಜಿ ಹನುಮಂತರಾಯಪ್ಪ,  ಆರೋಗ್ಯ ನಿರೀಕ್ಷಕರಾದ ಮಹಾಲಿಂಗರಾಜು, ಅಶೋಕ್, ಸಂಧ್ಯಾ, ಸುನಿಲ್, ನಯಾಜ್, ಸ್ಯಾಂಟ್ರಿ ಸೂಪರ್ವೈಸರ್ ದುರ್ಗೇಶ್ , ತಹ ಪ್ಯಾಲೇಸ್ ನ  ಮಹಮದ್ ನಾಜಿಮ್, ಐಬಿಎಂ ಪಂಕ್ಷನ್ ಹಾಲ್ ನ ಸೈಯದ್  ನಯೀಮುದ್ದಿನ್, ವ್ಯಾಪಾರಿ ಸೈಯದ್ ಅಸ್ಲಾಂ, ಪಾರಿಜಾತ ಕಲ್ಯಾಣ ಮಂಟಪದ ತಿಪ್ಪೇಸ್ವಾಮಿ, ಹಾಗೂ ಅನೇಕ ಅಂಗಡಿ ಮಾಲೀಕರು ಹೋಟೆಲ್ ಮತ್ತು ಬೀದಿ ಬದಿ ವ್ಯಾಪಾರಿಗಳು ಭಾಗವಹಿಸಿದ್ದರು.

ಅಂಗಡಿ ಮತ್ತು ಹೋಟೆಲ್ ಗಳಿಗೆ ಬರುವ ಗ್ರಾಹಕರನ್ನು ದೇವರೆಂದು ತಿಳಿಯಬೇಕು ಅವರಿಂದ ಹಣ ಪಡೆದು ವಿಷ ಕೊಡಬಾರದು ಉತ್ತಮ ಆಹಾರ ಕೊಡಬೇಕು . ಪ್ಲಾಸ್ಟಿಕ್ ಬಳಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ಬಾಲಕೃಷ್ಣ, ಅಧ್ಯಕ್ಷರು, ನಗರಸಭೆ ಹಿರಿಯೂರು.

 

 

Share This Article
error: Content is protected !!
";