ಮೆಕ್ಕೆಜೋಳ, ಶೇಂಗಾ ಖರೀದಿ ಕೇಂದ್ರ ತೆರೆಯಲಿ

News Desk

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಗಳನ್ನು ತೆರೆಯುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ರೈತರು ಮನವಿ ಪತ್ರ ಸಲ್ಲಿಸಿದರು.

ಚಿತ್ರದುರ್ಗ ಜಿಲ್ಲೆಯ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಳೆ ಬೆಲೆ ಕುಸಿತದಿಂದ ರೈತರು ಕಂಗಲಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಸರ್ಕಾರ ಮತ್ತು ಜಿಲ್ಲಾ ಆಡಳಿತಕ್ಕೆ ಮಿತಿಯಿಲ್ಲದೇ ರೈತರ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕೆಂದು ಮನವಿ ಸಲ್ಲಿಸಿದರೂ ಖರೀದಿ ಕೇಂದ್ರ ತೆರೆಯದೇ ನಿರ್ಲಕ್ಷ ವಹಿಸುತ್ತಿರುವುದರಿಂದ ಈಗಾಗಲೇ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಿರುತ್ತಾರೆ.

- Advertisement - 

ಆದ್ದರಿಂದ ತಕ್ಷಣ ಎಲ್ಲಾ ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ರೈತರ ಆರ್ಥಿಕ ಸ್ಥೈರ್ಯ ತುಂಬುವಂತಹ ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರ ಮತ್ತು ಜಿಲ್ಲಾ ಆಡಳಿತಕ್ಕೆ ರೈತರು ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಶೇಂಗಾ ಬೆಳೆ ಸಂಪೂರ್ಣ ಹಾನಿಯಾಗಿದ್ದರೂ ಸಹ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಇದುವರೆಗೂ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಈರುಳ್ಳಿ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ. ಅತಿವೃಷ್ಟಿಯಿಂದ ಈರುಳ್ಳಿ ಬೆಳೆ ಹಾಳಾಗಿದ್ದರೂ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ನೀಡಿಲ್ಲ. ಬೆಲೆ ಕುಸಿತದಿಂದ ಕಂಗಲಾಗಿರುವ ರೈತರಿಗೆ ಈರುಳ್ಳಿ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವಂತೆ ಮನವಿ ಸಲ್ಲಿಸಿದ್ದರೂ ಸಹ ಜಿಲ್ಲಾ ಆಡಳಿತ ಮತ್ತು ಅಧಿಕಾರಿಗಳ ನಿರ್ಲಕ್ಷತನ ಮಾಡಿರುವುದರಿಂದ ಜಿಲ್ಲಾಡಳಿತ ಹಾಗೂ ಸರ್ಕಾರ ರೈತರ ಪರವಾಗಿ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ರೈತರು ದೂರಿದರು.

- Advertisement - 

೨೦೨೨-೨೩ನೇ ಸಾಲಿನ ಅತಿವೃಷ್ಟಿಯಿಂದ ಬೆಳೆ ಪರಿಹಾರವನ್ನು ನಿಜವಾದ ಫಲಾನುಭವಿಗಳಿಗೆ ಪರಿಹಾರ ಹಾಕದೇ ಬೇನಾಮಿ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣ ವರ್ಗಾಹಿಸಿರುವುದು ಕಂಡುಬಂದಿದ್ದರೂ ಸಹ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಬೇನಾಮಿ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣವನ್ನು ಜಮಾ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮವಹಿಸಿ ನಿಜವಾದ ರೈತರಿಗೆ ಪರಿಹಾರದ ಹಣ ಜಮಾ ಮಾಡಲು ಕೂಡಲೇ ಕ್ರಮವಹಿಸೇಬೇಕೆಂದು ರೈತ ಹೋರಾಟಗಾರರು ಒತ್ತಾಯಿಸಿದ್ದಾರೆ.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಕಬ್ಬಿಗೆರೆ ನಾಗರಾಜ್, ಜಿಲ್ಲಾಧ್ಯಕ್ಷ ಡಿಎಸ್ ಹಳ್ಳಿ ಮಲ್ಲಿಕಾರ್ಜುನ್, ಬಾಗೇನಾಳ ತಿಪ್ಪೇಸ್ವಾಮಿ, ನಿಜಲಿಂಗಪ್ಪ, ರಾಮರೆಡ್ಡಿ, ಮೊಳಕಾಲ್ಮೂರು ಅಧ್ಯಕ್ಷ ಶಿವಮೂರ್ತಿ, ಮಂಜುನಾಥ್, ಪ್ರವೀಣ್, ಮಲ್ಲೇಶ್, ಸಂಜೀವಪ್ಪ, ಸದಾಶಿವ, ಮಾರುತಿ, ಕಲ್ಲೇಶ್, ಪ್ರವೀಣ್ ಕುಮಾರ್, ನಿರಂಜನ್, ಮೂರ್ತಿ, ಲೋಕಜ್ಜರ ಕುಮಾರ್, ವೆಂಕಟೇಶ್, ನಾಗಣ್ಣ, ರಾಜಶೇಖರ್, ಮಂಜುನಾಥ್, ನಾಗಭೂಷಣ್, ಹನುಮಂತ ರೆಡ್ಡಿ, ನಾಗೇಶ್, ಮಲ್ಲಿಕಾರ್ಜುನ್, ಹನುಮಂತಪ್ಪ, ಜಯಪ್ಪ, ಧನಂಜಯ, ಬಾಬುರೆಡ್ಡಿ ಇನ್ನೂ ಮುಂತಾದವರಿದ್ದರು.

 

Share This Article
error: Content is protected !!
";