ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಬ್ಯಾನರ್ ಕಟ್ಟುವ ವಿಚಾರವಾಗಿ ಜನವರಿ 1ರಂದು ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ನಡೆದ ಸಂಘರ್ಷದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದು ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ.
ಬಳ್ಳಾರಿ ಕಲ್ಲುತೂರಾಟ, ಘರ್ಷಣೆ, ಗಾಳಿಯಲ್ಲಿ ಗುಂಡು ಹಾರಿಸಿರುವ ಬಗ್ಗೆ ಕಾಂಗ್ರೆಸ್, ಬಿಜೆಪಿ ಆರೋಪ ಪ್ರತ್ಯಾರೋಪ ಭುಗಿಲೆದ್ದಿದೆ.
ಈ ಸಂಬಂಧ ಶಾಸಕ ಗಾಲಿ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 11.30ಕ್ಕೆ ಎಎಸ್ಪಿ ರವಿಕುಮಾರ್ ಜೊತೆ ನಾನು ಪೋನ್ ನಲ್ಲಿ ಮಾತಾಡಿದೆ. ನಾಲ್ಕು ಮಂದಿ ಗನ್ ಮ್ಯಾನ್ ಗಳ ಪೈಕಿ ಅದರಲ್ಲಿ ಗುರುಚರಣ್‌ಅವರ ಗುಂಡು ಹಾರಿಸಿದ್ದು ಕನ್ಪರ್ಮ್ ಆಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಸಿದ್ಧತೆಗಾಗಿ ಭರತ್ ರೆಡ್ಡಿ ಶ್ರೀಮತಿ ಅವರು ಓಡಾಡಿಕೊಂಡು ಇರೋದಕ್ಕೆ ಭರತ್ ರೆಡ್ಡಿ ಜತೆಗೂ ಇವರನ್ನ ಇಟ್ಕೊಂಡಿದ್ದರು. ಸೋಷಿಯಲ್ ಮೀಡಿಯಾದ ವೀಡಿಯೋದಿಂದ ನೋಡಿದ್ದೀನಿ.
ಭರತ್ ರೆಡ್ಡಿ ಅವರೇ ತಮ್ಮಪ್ಯಾಮಿಲಿ ಭದ್ರತೆಗಾಗಿ ಖಾಸಗಿ ಗನ್ ಮ್ಯಾನ್ ಗಳನ್ನ ಇಟ್ಕೊಂಡಿದ್ದಾರೆ. ಭರತ್‌ರೆಡ್ಡಿ ಗನ್ ಮ್ಯಾನ್‌ಗಳನ್ನಸತೀಶ್ ರೆಡ್ಡಿ ಅವರು ಇಟ್ಕೊಂಡಿದ್ರು. ಹಾಗಾಗಿ ಭರತ್ ರೆಡ್ಡಿ ಅವರನ್ನ ಅರೆಸ್ಟ್ ಮಾಡಬೇಕು ಎಂದು ಜನಾರ್ದನರೆಡ್ಡಿ ಆಗ್ರಹಿಸಿದರು.

