ಮೋದಿ ಅವರು ಚೀನಾದ ಸರಕುಗಳನ್ನು ನಿಷೇಧಿಸಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇವಲ ಟಿಕ್ ಟಾಕ್
, ಶೇರ್ ಚಾಟ್ ನಂತಹ 59 ಚೀನಿ ಆಪ್‌ಗಳನ್ನು ಬ್ಯಾನ್ ಮಾಡಲು ಎಲ್ಲಿಲ್ಲದ ಆಸಕ್ತಿ ತೋರಿದ ಪ್ರಧಾನಿ ಮೋದಿಯವರು, ಚೀನಾದಿಂದ ಆಮದಾಗುತ್ತಿರುವ ಸರಕುಗಳನ್ನು ನಿಷೇಧಿಸುವುದಕ್ಕೆ ಮಾತ್ರ ಹಿಂಜರಿಯುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ಮಾಡಿದೆ.

2013 – 14ರ UPA ಸರ್ಕಾರದ ಅವಧಿಯಲ್ಲಿ ಚೀನಾದಿಂದ ಭಾರತಕ್ಕೆ  $51.34 ಬಿಲಿಯನ್ ಮೌಲ್ಯದಷ್ಟು ಸರಕುಗಳು ಆಮದಾಗಿತ್ತು. ಆದರೆ 2023 – 24 ರ ಮೋದಿ ಸರ್ಕಾರದಲ್ಲಿ $101.7 ಬಿಲಿಯನ್ ಮೌಲ್ಯದಷ್ಟು ಸರಕುಗಳು ಆಮದಾಗಿವೆ. ಕೇವಲ 10 ವರ್ಷಗಳಲ್ಲಿ ಚೀನಾದಿಂದ ಆಮದಾಗುತ್ತಿರುವ ಸರಕುಗಳ ಮೌಲ್ಯ 100% ಹೆಚ್ಚಾಗಿದೆ! ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.

ಚೀನಾದಿಂದ ಆಮದಾಗುತ್ತಿರುವ ಸರಕುಗಳಿಂದ ಚನ್ನಪಟ್ಟಣದ ಬೊಂಬೆ ತಯಾರಿಸುವಂತಹ ಗುಡಿ ಕೈಗಾರಿಕೆಗಳು, ಸ್ವದೇಶಿ ಉತ್ಪಾದನಾ ವಲಯಕ್ಕೆ ಹೊಡೆತ ಬಿದ್ದಿದ್ದಲ್ಲದೇ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಗಳು ಹಾಗೂ ಅನೇಕ ಕಾರ್ಖಾನೆಗಳಿಗೆ ಬೀಗ ಬೀಳುವಂತಾಗಿದೆ.

ಒಂದು ಫೋನ್ ಕರೆಯಿಂದ ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿಯವರಿಗೆ ಚೀನಾದಿಂದ ಆಮದಾಗುತ್ತಿರುವ ಸರಕುಗಳನ್ನು ನಿಷೇಧಿಸುವ ಧೈರ್ಯವಿಲ್ಲವೇ?! ಎಂದು ಮೋದಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.

 

- Advertisement -  - Advertisement - 
Share This Article
error: Content is protected !!
";