ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮೊದಲು ಯಾವ ಬಸ್ ಹತ್ತಬೇಕು ಅನ್ನೋದನ್ನು ತೀರ್ಮಾನಿಸಲಿ. ಆ ಮೇಲೆ ಟಿಕೆಟ್ ಕೊಡೋದು ಬಿಡೋದು ಕಂಡಕ್ಟರ್ ಕೆಲಸ ಎಂದು ಬಿಜೆಪಿ ನಾಯಕ, ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಬಿಜೆಪಿಗೆ ಬಂದರೆ ಸೇರಿಸಿಕೊಳ್ಳುತ್ತೀರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ವಿಪಕ್ಷ ನಾಯಕ ಆರ್. ಅಶೋಕ್ ಸ್ಪಷ್ಟನೆ ನೀಡಿ ಮಾಡಿದ್ದಾರೆ.
ನವೆಂಬರ್ ಕ್ರಾಂತಿ ಕಾರಣ ಹಲವು ವಿಷಯಗಳನ್ನ ಹರಿಬಿಡಲಾಗಿದೆ. ಆಫರ್ ಬಂದಿದೆ ಅಂದರೆ ಇವರು ಲೈನ್ನಲ್ಲಿ ಇದ್ದಾರೆ ಎಂದರ್ಥ. ಡಿಕೆಶಿ ಅವರನ್ನ ಅಷ್ಟು ಸುಲಭವಾಗಿ ಅಳೆಯಲು ಸಾಧ್ಯವಿಲ್ಲ. ಒಂದು ಕಲ್ಲಲ್ಲಿ ಎರಡು ಹಕ್ಕಿಯನ್ನ ಅವರು ಹೊಡೆಯುತ್ತಾರೆ ಎಂದು ಅಶೋಕ್ ಹೇಳಿದ್ದಾರೆ.

