ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್ ಸರ್ಕಾರ ಸಾಧನಾ ಸಮೇಶಕ್ಕೆ ಬಿಜೆಪಿ ನಾಯಕರ ಪ್ರಶ್ನೆ ವಿಚಾರ ಕುರಿತು ಚಿತ್ರದುರ್ಗದಲ್ಲಿ ಸಚಿವ ಶಿಚರಾಜ್ ತಂಗಡಗಿ ಹೇಳಿಕೆ ನೀಡಿ,
ಶೋಭಾ ಕರಂದ್ಲಾಜೆ ಕೇಂದ್ರ ಸರ್ಕಾರದ ವರ್ಷದ ಸಾಧನೆ ಪಟ್ಟಿ ನೀಡಲಿ ಎಂದು ಸಚಿವ ಶಿವರಾಜ್ ತಂಗಡಗಿ ತಾಕೀತು ಮಾಡಿದರು. ನಮ್ಮ ಸರ್ಕಾರದ ಸಾಧನೆ ಪಟ್ಟಿಯನ್ನ ನಾವು ಕೊಡುತ್ತೇವೆ.
ಬಡ ಜನ ನೆಮ್ಮದಿ ಬದುಕು ಮಾಡುತ್ತಿರುವುದು ಗ್ಯಾರಂಟಿಯಿಂದ ಎಂದರು. ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ದರು, ಎಲ್ಲಿದೆ 15 ಲಕ್ಷ ಹಣ. ಮಾತನಾಡುವರು ಮೊದಲು ತಮ್ಮ ತಟ್ಟೆ ನೋಡಿಕೊಂಡು, ಇನ್ನೊಬ್ಬರ ತಟ್ಟೆ ನೋಡಲಿ ಎಂದು ತಿರುಗೇಟು ನೀಡಿದರು.
ಅವರ ತಟ್ಟೆಯಲ್ಲಿ ಕತ್ತೆ ಬಿದ್ದಿದೆ, ಬೇರೆ ತಟ್ಟೇಲಿ ನೊಣ ನೋಡೋದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ ಎಂದು ಆಗ್ರಹಿಸಿದರು. ಬಿಜೆಪಿ ನಾಯಕರು ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ, ಕಾಂಗ್ರೆಸ್ ನಾಯಕರಲ್ಲ.
ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ಸುರ್ಜೇವಾಲಾ ಬಂದು ಚರ್ಚೆ ಮಾಡ್ತಾರೆ. ಶಾಸಕರ ಸಮಸ್ಯೆ ಕುರಿತು ಚರ್ಚೆ ಮಾಡಿದ್ದಾರೆ, ಸರ್ಕಾರದ ಬಗ್ಗೆ ಅಲ್ಲ ಎಂದು ತಿಳಿಸಿದರು.
ಬಿಜೆಪಿ ಎರಡು ಗುಂಪು ಇದೆ ಆ ಕುರಿತು ಶೋಭ ಕರಂದ್ಲಾಜೆ ಮಾತನಾಡಲಿ. ಮನೆ ಒಂದು 16 ಬಾಗಿಲು ಬಿಜೆಪಿಯಲ್ಲಿ ಆಗಿದೆ, ಕಾಂಗ್ರೆಸ್ ಬಗ್ಗೆ ಏನ್ ಮಾತಾಡ್ತಾರೆ ಎಂದು ಪ್ರಶ್ನಿಸಿದರು.
ಸುರ್ಜೇವಾಲಾ ಬಂದು ನಮಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. 30 ಕ್ಕೆ ಮೀಟಿಂಗ್ ಇದೆ, ಎಲ್ಲಾ ಶಾಸಕರಿಗೆ 50 ಕೋಟಿ ಅನುದಾನ ಕೊಡ್ತಿವಿ ಅಂದಿದ್ದಾರೆ ತಪ್ಪೇನಿದೆ.
ದಲಿತರನ್ನ ರಾಷ್ಟ್ರಪತಿ ಮಾಡಿದ್ದೇವೆ, ತಾಕತ್ತಿದ್ದರೆ ಕಾಂಗ್ರೆಸ್ ಸಿಎಂ ಮಾಡಲಿ ಎಂಬ ಬಿವೈವಿ ಹೇಳಿಕೆ ವಿಚಾರ ಕುರಿತು ಮಾತನಾಡಿದ ತಂಗಡಗಿ,
ದಲಿತರನ್ನ ಬಿಜೆಪಿ ನಾಯಕರು ಪ್ರಧಾನಿ ಮಂತ್ರಿ ಮಾಡಲಿ, ಯಾಕೆ ಮಾಡಬಾರದು. ದಲಿತರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ.
ಬಿಜೆಪಿ ಯವರು ದಲಿತರನ್ನ ಬಳಸಿಕೊಂಡಿದ್ದಾರೆ ಅಷ್ಟೇ, ಯಾವುದೇ ಹುದ್ದೆ ಕೊಟ್ಟಿಲ್ಲ. ಕಾಲ ಬಂದಾಗ ಕಾಂಗ್ರೆಸ್ ನಲ್ಲಿ ದಲಿತರು ಸಿಎಂ ಆಗುತ್ತಾರೆ, ಕಾಲ ಬಂದಾಗ ಪ್ರಧಾನಿ ಕೂಡಾ ಆಗ್ತಾರೆ ಅದು ಕಾಂಗ್ರೆಸಲ್ಲಿ ಮಾತ್ರ, ಬೇರೆ ಪಾರ್ಟಿಯಲ್ಲಿ ಅಲ್ಲ ಎಂದು ಹೇಳಿದರು.