ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಿಯಾಂಕ್ ಖರ್ಗೆ ಅವರ ಆಪ್ತಮಿತ್ರ, ಕಾಂಗ್ರೆಸ್ ಮುಖಂಡ ರಾಜು ಕಪನೂರು ಪಿತೂರಿಯಿಂದ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡಿದ್ದು ಬಹಿರಂಗ ಸತ್ಯ. ಇದು ಡೆತ್‌ನೋಟ್‌ನಲ್ಲೂ ಉಲ್ಲೇಖವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.
ರಾಜಕೀಯ ಷಡ್ಯಂತ್ರ, ಆಡಳಿತ ಪಕ್ಷದ ಕೈವಾಡ ಇರುವುದರಿಂದ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ನೀಡಬೇಕೆಂದು ಮೃತರ ಕುಟುಂಬಸ್ಥರೇ ಆಗ್ರಹಿಸಿದ್ದಾರೆ. ಆದ್ದರಿಂದ ಸರ್ಕಾರ ಈ ಕೂಡಲೇ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ರಾಜ್ಯಾಧ್ಯಕ್ಷ ಆಗ್ರಹಿಸಿದ್ದಾರೆ.
ಗೂಂಡಾ ಮಂತ್ರಿ ಪ್ರಿಯಾಂಕ್ ಖರ್ಗೆ ಅವರಿಗೆ ಗೂಂಡಾ ಗುಲಾಮರೇ ಆಪ್ತರಾಗಿದ್ದಾರೆ. ಗುತ್ತಿಗೆದಾರ ಸಚಿನ್‌ಪಾಂಚಾಳ್‌ಸಾವಿಗೆ ಕಾರಣನಾದ ರಾಜು ಕಪನೂರು ಗೂಂಡಾ ಆಪ್ತನಾಗಿದ್ದರೆ, ರಾಜೀವ್‌ಜಾನೆ ಬೈಕ್ ಸವಾರನಿಗೆ ನಿಂದಿಸಿ ಜೀವ ಬೆದರಿಕೆ ಹಾಕಿದ ಮತ್ತೊಬ್ಬ ಗೂಂಡಾ ಆಪ್ತನಾಗಿದ್ದಾನೆ.
ಕಲಬುರಗಿ ಜಿಲ್ಲೆಯನ್ನು ಅಭಿವೃದ್ಧಿ ಮಾಡದೆ ಇಷ್ಟು ವರ್ಷ ಖರ್ಗೆ ಅವರು ಗೆಲ್ಲುತ್ತಿರುವುದು ಗೂಂಡಾಗಿರಿ ಮೂಲಕವೇ ಎನ್ನುವುದು ಖಾತರಿ ಆಗಿದೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.