ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯಾವುದೇ ಕ್ಷೇತ್ರದವರಿರಲಿ ಉತ್ತಮ ಕೆಲಸ ಮಾಡುತ್ತಿರುವ ಮತ್ತು ಪ್ರತಿಭಾನ್ವಿತರನ್ನ ಪತ್ತೆ ಮಾಡಿ ಅಭಿನಂದನೆ ಅಥವಾ ಗೌರವ ಸನ್ಮಾನ ನೀಡುವುದರಿಂದ ಅವರಿಗೆ ಇದರಿಂದ ಉಮ್ಮಸ್ಸು ಇಮ್ಮಡಿ ಆಗುತ್ತದೆ. ಅವರಿಂದ ಇನ್ನಷ್ಟು ಮತ್ತಷ್ಟು ಸೇವೆಯನ್ನ ಸಮಾಜ ನಿರೀಕ್ಷಿಸಬಹುದಾಗಿದೆ ಎಂದು ಯೋಗಾಚಾರ್ಯ ಎಲ್.ಎಸ್. ಚಿನ್ಮಯಾನಂದ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ರೋಟರಿ ಬಾಲವನದಲ್ಲಿ ಇಂದು ಮುಂಜಾನೆ ಇತ್ತೀಚಿಗೆ ನಡೆದ ಸರ್ಕಾರಿ ನೌಕರರ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಅರ್ಹತೆ ಪಡೆದ ಯೋಗ ಶಾಲೆಗೆ ವಿದ್ಯಾರ್ಥಿಗಳಾಗಿ ಬರುವ ಇಬ್ಬರಿಗೆ ಗೌರವ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೆ.ಟಿ. ತಿಮ್ಮಾರೆಡ್ಡಿ ಹಾಗೂ ವಿಮಲಾಕ್ಷಿ ಅವರು ನಮ್ಮ ಯೋಗ ತರಬೇತಿ ಸಂಸ್ಥೆಯಲ್ಲಿ ನಿತ್ಯವೂ ತರಬೇತಿ ಪಡೆಯುವ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಹೊಣೆಗಾರಿಕೆ ನಮ್ಮ ಸಂಸ್ಥೆಯದಾಗಿದ್ದರಿಂದ ಈ ಕಾರ್ಯವನ್ನು ಮಾಡಬೇಕಾಗಿದೆ .
ಹಾಗೆ ನಾವು ದಿನದ 24 ಗಂಟೆಗಳಲ್ಲಿ ವಹಿಸಿಕೊಂಡ ಕೆಲಸ 8 ತಾಸು ದುಡಿಮೆ, 8 ತಾಸು ನಿದ್ದೆ ಇನ್ನುಳಿದ ಎಂಟು ತಾಸಿನಲ್ಲಿ ಆರೋಗ್ಯ ,ಸಮಾಜ ಸೇವೆ ಹಾಗೆ ಸಂಸಾರದ ಕೆಲಸಗಳನ್ನು ನಿರ್ವಹಿಸಿ ಸಾರ್ಥಕ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಗೌರವ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ. ಟಿ. ತಿಮ್ಮಾರೆಡ್ಡಿ ಅವರು ಸರ್ಕಾರಿ ನೌಕರರ ಪ್ರತಿನಿಧಿಯಾಗಿ ಆಯ್ಕೆಯಾದ ನನಗೆ ಈ ಗೌರವ ಜವಾಬ್ದಾರಿ ಹೆಚ್ಚಿಸಿದೆ. ಇಲಾಖೆಯ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಬೇಕಾಗುತ್ತದೆ. ಎರಡು ಬಾರಿ ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾದ ನನಗೆ ಕಳೆದ ಒಂದೂವರೆ ವರ್ಷ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತು,
ಈ ಅವಧಿಯಲ್ಲಿ ಹೆಜ್ಜೆ ಗುರುತು ನಿರ್ಮಿಸಿದ ತೃಪ್ತಿ ನನಗಿದೆ. ಸಾರ್ವಜನಿಕ ಕೆಲಸದಲ್ಲಿರುವವರಿಗೆ ನಮ್ಮ ಸ್ವಂತ ಮನೆಯ ಕೆಲಸಗಳ ಕಡೆಗೂ ಆದ್ಯತೆ ನೀಡಬೇಕಾಗುತ್ತದೆ.ಎರಡೂ ಕಡೆ ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿಯುತ ನಡೆಯಾದಾಗ ನ್ಯಾಯ ಒದಗಿಸಿದಂತಾಗುತ್ತದೆಂದರು.
ಮತ್ತೋರ್ವ ನಿರ್ದೇಶಕರಾಗಿ ಆಯ್ಕೆಯಾದ ವಿಮಲಾಕ್ಷಿ ಅವರು ಮಾತನಾಡಿ ಈಗ ಚುನಾವಣೆಯಲ್ಲಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಸ್ಪರ್ಧಿಸಿದ ಎಲ್ಲರೂ ಗೆದ್ದೇ ಗೆಲ್ಲಬೇಕೆಂಬ ವಿಶ್ವಾಸದಲ್ಲಿ ಇರುತ್ತಾರೆ. ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಗುರುತಿಸಿದ ಕಾರಣ ನಾನು ಎರಡನೇ ಹಂತದಲ್ಲಿ ಗೆದ್ದೆ ಎಂದು ವಿನೀತ ಹಾಗೂ ಅಭಿಮಾನದಿಂದ ಹೇಳುತ್ತೇನೆ.
ನಾನು ಯೋಗ ತರಬೇತಿ ಶಾಲೆಯಲ್ಲಿ ಏಕಾಗ್ರತೆ ,ಬದ್ಧತೆ, ಶಿಸ್ತಿನ ಹಾಗೆ ಛಲ ಕಲಿತ ಕಾರಣ ಚುನಾವಣೆಗೆ ನಿಂತೆ ಎಂದ ಅವರು ಬಾಳ ಜನ ತುಳಿಯಲೇಬೇಕು ಅಂದಾಗ ಬೆಳೆಯಬೇಕೆಂಬ ಹಠ ಬರುತ್ತದೆ. ಅದು ನಮ್ಮ ದೈನಂದಿನ.ಚಟುವಟಿಕೆಗಳಿಂದ ಸಾಧ್ಯ. ಅದು ನಾವು ನಿತ್ಯ ಯೋಗ ಸಾಧನೆ ಮಾಡಿದರೆ ಪ್ರಾಪ್ತವಾಗುತ್ತದೆ ಎಂದರು.ನನ್ನ ಮೇಲೆ ಜವಾಬ್ದಾರಿ ಇದೆ. ಅದನ್ನ ನಿಭಾಯಿಸಲು ನನ್ನ ಕೈಲಾಸದ ಪ್ರಯತ್ನ ಮಾಡುವುದಾಗಿ ಹೇಳಿದರು.
ಚುನಾವಣೆ ಎನ್ನುವುದು ಜವಾಬ್ದಾರಿಯುತ ಹೊಣೆಗಾರಿಕೆಯಾಗಿದ್ದು,ಅದನ್ನ ಸರಿಯಾದ ಕ್ರಮದಲ್ಲಿ ನಡೆಯುವಂತಾಗಬೇಕು. ಮಹಿಳೆಯರಿಗೆ ಈ ಚುನಾವಣೆಯಲ್ಲೇನು ಪ್ರಾತಿನಿಧ್ಯ ಇರಲಿಲ್ಲ. ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾದವರು ಬಹುತೇಕ ಅವರ ಪತಿಗಳೇ ಆಡಳಿತ ನಡೆಸುವುದು ಅದು ಈಗ ಪ್ರಪಂಚದ ಎಲ್ಲಾ ಕಡೆ ಮಾಮೂಲಿಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಕುಮಾರ್ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳಲ್ಲಿ ಹೇಳಿದರು.
ಸಮಾರಂಭದ ಆರಂಭಕ್ಕೆ ಕೋಕಿಲ ಎಂ.ಜೆ ಅವರು ಪ್ರಾರ್ಥನೆ ಹಾಡಿದರು. ಟಿ. ವೀರಭದ್ರಸ್ವಾಮಿ ಮುಕುಂದರಾಜ್, ಸುರಯ್ಯ,ಚಂದ್ರಶೇಖರ್,ನಿರ್ಮಲದಂಪತಿ, ಕವಿತಾ,ರುಕ್ಮಿಣಿ,ನಾಗರತ್ನ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.