ಶರಣ ತತ್ತ್ವದ ಮಹಿಮೆ ಮುಂದಿನ ತಲೆಮಾರಿಗೆ ಸಾಗಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಸವ ತತ್ತ್ವಗಳ ಬೆಳಕಿನಲ್ಲಿ 830ನೇ ಬಸವಪಂಚಮಿ ಹಾಗೂ ಬಸವಮಂಟಪದ ಸುವರ್ಣ ಸಂಭ್ರಮ ಆಚರಿಸಲಾಯಿತು ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

830ನೇ ಬಸವ ಪಂಚಮಿಹಾಗೂ ಬೆಂಗಳೂರು ರಾಜಾಜಿನಗರದ ಬಸವಮಂಟಪದ ಸುವರ್ಣ ಮಹೋತ್ಸವದ ಕಾರ್ಯಕ್ರಮವನ್ನು ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳುಶ್ರೀ ನಿಜಗುಣಾನಂದ ಮಹಾಸ್ವಾಮಿಗಳು, ಮಾತೆ ಡಾ. ಗಂಗಾದೇವಿ ಹಾಗೂ ಸಮಾಜದ ಹಿರಿಯರೊಂದಿಗೆ ಅವರು ಉದ್ಘಾಟಿಸಿ ಮಾತನಾಡಿದರು.

- Advertisement - 

ಬಸವಮಂಟಪದ ಈ ಸುವರ್ಣ ಸಾಧನೆ ಶರಣ ತತ್ತ್ವದ ಮಹಿಮೆಯನ್ನು ಮುಂದಿನ ತಲೆಮಾರಿಗೆ ಸಾರುವ ದೀಪವಾಗಲಿ ಸಚಿವರು ಆಶಿಸಿದರು.

ಲಿಂ|| ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಲಿಂ|| ಪೂಜ್ಯ ಮಾತೆ ಮಹಾದೇವಿಯವರು ವಿಶ್ವ ಕಲ್ಯಾಣ ಮಿಷನ್ ಮೂಲಕ ಬಸವಮಂಟಪ ಸ್ಥಾಪಿಸಿ ಬಸವಾದಿ ಶರಣರ ತತ್ವಗಳ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದರು. ನಾಡು ಕಂಡ ಅತ್ಯಂತ ಶ್ರೇಷ್ಠ ಮಹಿಳಾ ಜಗದ್ಗುರುಗಳಾಗಿದ್ದರು. ಅವರ ದೃಢ ಸಂಕಲ್ಪ ಮತ್ತು ಬದ್ಧತೆಯಿಂದಾಗಿ ಸಂಸ್ಥೆ ಇಂದು ಸುವರ್ಣ ಮಹೋತ್ಸವ ಆಚರಿಸುವಂತಾಗಿದ್ದು, ಇದೊಂದು ಹೆಮ್ಮೆಯ ಕ್ಷಣವಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

- Advertisement - 

ಇದೇ ಸಂದರ್ಭದಲ್ಲಿ ಖ್ಯಾತ ಸಾಹಿತಿಗಳು, ಜಾನಪದ ವಿದ್ವಾಂಸರು, ನಾಡೋಜ ಶರಣ ಡಾ. ಗೊ.ರು. ಚನ್ನಬಸಪ್ಪ ಅವರಿಗೆ ಬಸವಕಾಯಕ ರತ್ನರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇದಿಕೆಯ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಮತ್ತು ಗಮನಾರ್ಹ ಸೇವೆ ಸಲ್ಲಿಸಿದ ಸಾಧಕ ಶರಣರನ್ನು ಸನ್ಮಾನಿಸಲಾಯಿತು.

ಶರಣ ವೈದ್ಯರತ್ನ ಪುರಸ್ಕೃತ ಡಾ. ಅಮರೇಶ್ ಮಿಣಜಗಿ, ಡಾ. ಸಿ. ವಿ. ದೇವರಾಜ್, ಬೆಂಗಳೂರಿನ ಮಾಜಿ ಉಪಮಹಾಪೌರರಾದ ಶ್ರೀ ಬಿ.ಎಸ್. ಪುಟ್ಟರಾಜು, ಮುಖಂಡರಾದ ಶ್ರೀ ಮಲ್ಲಿಕಾರ್ಜುನ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಶರಣ-ಶರಣೆಯರು, ಬಸವಭಕ್ತರು ಇಂದಿನ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

Share This Article
error: Content is protected !!
";