ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಬಿಜೆಪಿ ನಾಯಕ, ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಳ್ಳಾರಿಯಲ್ಲಿನ ಜನಾರ್ದನರೆಡ್ಡಿ ಅವರ ಮನೆ ಬೀದಿಯಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಘರ್ಷಣೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಪಕ್ಷದ ಕಾರ್ಯಕರ್ತರ ವಿರುದ್ಧ ಗೂಂಡಾಗಿರಿಯ ಆರೋಪ ತಳ್ಳಿಹಾಕಿದ ಶ್ರೀರಾಮುಲು,
ವಿರೋಧಿಗಳೇ ಪೂರ್ವನಿಯೋಜಿತವಾಗಿ ಪೆಟ್ರೋಲ್ ಬಾಂಬ್ಗಳನ್ನು ತಂದು, ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದರು.
ಗುಂಡಿನ ದಾಳಿ ಕೂಡ ಅವರ ಕಡೆಯಿಂದಲೇ ನಡೆದಿದೆ. ಸತೀಶ್ ರೆಡ್ಡಿ ಅವರ ಬೆಂಬಲಿಗರು ಮತ್ತು ಅಂಗ ರಕ್ಷಕರು ಗುಂಡು ಹಾರಿಸಿದ್ದಾರೆ.
ಹೀಗಾಗಿ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ಅಥವಾ ಸಿಬಿಐನಿಂದ ತನಿಖೆ ನಡೆಸಬೇಕು ಎಂದು ಶ್ರೀರಾಮುಲು ಒತ್ತಾಯಿಸಿದ್ದಾರೆ. ಜೊತೆಗೆ ಘಟನೆಗೆ ಸಂಬಂಧಿಸಿ ಸ್ಪೋಟಕ ವಿಡಿಯೋ ಸಾಕ್ಷಿಯೊಂದನ್ನು ಶ್ರೀರಾಮುಲು ಅವರು ಬಹಿರಂಗೊಳಿಸಿದರು.

