ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶವೊಂದರ ಅಭಿವೃದ್ಧಿಯ ವೇಗವನ್ನು ನಿರ್ಧರಿಸುವುದು ದುಡಿಯುವ ಕೈಗಳ ಕ್ಷಮತೆ ಮತ್ತು ದಕ್ಷತೆ. ಹಗಲಿರುಳೆನ್ನದೆ ರಾಷ್ಟ್ರನಿರ್ಮಾಣದಲ್ಲಿ ಅರ್ಪಿಸಿಕೊಂಡಿರುವ ಕಾರ್ಮಿಕರ ಘನತೆಯ ಬದುಕು ಮತ್ತು ಕೆಲಸಕ್ಕೆ ತಕ್ಕ ಕೂಲಿಯ ಕೂಗಿಗೆ ನಾವು ದನಿಗೂಡಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಾಡಿನ ಸಮಸ್ತ ಶ್ರಮಜೀವಿಗಳಿಗೆ ಕಾರ್ಮಿಕ ದಿನದ ಶುಭಾಶಯಗಳು. ನಮ್ಮ ಸರ್ಕಾರ ನಿಮ್ಮೊಂದಿಗೆ ಸದಾ ಇರಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.