ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇರಳದ ಜನರಿಗೆ ಸಮಸ್ಯೆಯಾದರೇ ಮುತುವರ್ಜಿಯಿಂದ ಕಾಂಗ್ರೆಸ್ ನಾಯಕರ ಆದೇಶ ಪಾಲಿಸುವ ಸಿದ್ದರಾಮಯ್ಯ ಅವರೇ ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಮಲೆಯಾಳಿ ಭಾಷಾ ಮಸೂದೆಯನ್ನು ವಿರೋಧಿಸಿ ಕೇವಲ ಟ್ವೀಟ್‌ಮಾಡಿದರೆ ಸಾಲದು.
ನಮ್ಮ ರಾಜ್ಯದ ಸಚಿವರ ನಿಯೋಗವನ್ನು ಕೇರಳಕ್ಕೆ ಕಳುಹಿಸಿ. ಕನ್ನಡಿಗರ ಮಾತೃಭಾಷೆಯ ಮೇಲಿನ ಗಧಾಪ್ರಹಾರವಾಗಿರುವ ಮಸೂದೆಯನ್ನು ವಾಪಸ್‌ಪಡೆಯಲು ಕೇರಳ ಸರ್ಕಾರದ ಮೇಲೆ ಒತ್ತಡ ಹೇರಿ. ಆ ಒತ್ತಡ ಹೇರುವುದಕ್ಕೆ ‘ಕೇರಳ ಹೈಕಮಾಂಡ್‘ ನಿಮಗೆ ಆದೇಶ ಕೊಡಬೇಕಾ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಕಾಸರಗೋಡಿನ ಕನ್ನಡಿಗರು ತಮ್ಮ ಮಾತೃಭಾಷೆಯ ಕಲಿಕೆಯ ಅವಕಾಶದಿಂದ ವಂಚಿರನ್ನಾಗಿಸುತ್ತಿರುವ ಹಾಗೂ ಕೇರಳದಲ್ಲಿ ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ಕಸಿಯುತ್ತಿರುವ ಪಿಣರಾಯಿ ವಿಜಯನ್ ಸರ್ಕಾರದ ನಡೆಗೆ ಕನ್ನಡಿಗರ ತೀವ್ರ ವಿರೋಧವಿದೆ. ಕೋಗಿಲು ಅಕ್ರಮ ವಲಸಿಗರ ಪ್ರಕರಣದಲ್ಲಿ ಕೇರಳದ ಪಿಣರಾಯಿ ಸರ್ಕಾರವು ಸಂಸದರ ನಿಯೋಗವನ್ನು ಕೋಗಿಲು ಬಡಾವಣೆಗೆ ಕಳಿಸಿ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರಿದ್ದನ್ನು ಕನ್ನಡಿಗರು ಯಾರು ಮರೆತಿಲ್ಲ ಎಂದು ಜೆಡಿಎಸ್ ಜ್ಞಾಪಿಸಿದೆ.
ಕಾಂಗ್ರೆಸ್‌ಹೈಕಮಾಂಡ್‌ಹಾಗೂ ಕೆ.ಸಿ ವೇಣುಗೋಪಾಲ್ ಸೂಚನೆಗೆ ಮಂಡಿಯೂರಿ, ತರಾತುರಿಯಲ್ಲಿ ಸಭೆಗಳನ್ನು ನಡೆಸಿ ಅಕ್ರಮ ವಲಸಿಗರಿಗೆ ವಸತಿ ಕಲ್ಪಿಸಿದ್ದು ನೀವೇ ಅಲ್ಲವೇ ಸಿದ್ದರಾಮಯ್ಯನವರೇ?
ಇಂಡಿ ಮೈತ್ರಿಕೂಟದ ಭಾಗವಾಗಿರುವ ಎಲ್ ಡಿಎಫ್ ಸರ್ಕಾರದ ಈ ಭಾಷಾ ಸ್ವಾತಂತ್ರ್ಯದ ಧಮನಕಾರಿ ಮಸೂದೆಯನ್ನು ಹಿಂಪಡೆಯುವಂತೆ ಹೈಕಮಾಂಡ್‌ಮಟ್ಟದಲ್ಲಿ ಕಾಂಗ್ರೆಸ್‌ಸರ್ಕಾರ ಚರ್ಚಿಸಿ, ಕಾಸರಗೋಡಿನ ಕನ್ನಡಿಗರ ಭಾಷೆಯ ರಕ್ಷಣೆ ಹಾಗೂ ಅವರ ಹಿತಕಾಯುವ ಕೆಲಸವನ್ನು ಮಾಡಬೇಕು ಎಂದು ಜೆಡಿಎಸ್ ಪಕ್ಷವು ಆಗ್ರಹಿಸಿದೆ.

