ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಿಜವಾಗಲೂ ವಿಶ್ವ ಜಲ ದಿನಾಚರಣೆ ಆ ದಿನಕ್ಕೆ ಅರ್ಥ ಪೂರ್ಣ ಸಿಗಬೇಕಾದರೆ ಕೆರೆಗಳಿಗೆ ಹರಿಯುತ್ತಿರುವ ಕೊಳಚೆ ನೀರನ್ನು ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯ್ತಿ ಕೆರೆಗಳ ಶುದ್ಧೀಕರಣಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ವಿಶ್ವ ಜಲ ದಿನಾಚರಣೆ ದಿನದಂದು ಗ್ರಾಮಸ್ಥರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡುತ್ತೆವೆ ಎಂದು ಆರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ಸಮಿತಿ ಹಾಗೂ ಕೆರೆ ಹೊರಾಟ ಸಮಿತಿ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರು ಮಾತಾಡಿದರು. ಮಾರ್ಚ್ 22 ರಂದು ವಿಶ್ವ ಜಲ ದಿನಾಚರಣೆಯನ್ನು ಜಿಲ್ಲಾಡಳಿತ ಆಚರಿಸುತ್ತಿದೆ. ವಿಶ್ವ ಜಲ ದಿನಾಚರಣೆ ಆಚರಿಸುವುದು ಯಾವುದೋ ಒಂದು ಕೆರೆ ಯಾವುದೋ ಒಂದು ಕಲ್ಯಾಣಿಯಲ್ಲಿ ಬೆಳೆದಿರುವ ಗಿಡಗಂಟೆ ಕಿತ್ತು ಸ್ವಚ್ಛಗೊಳಿಸಿದ್ದೇವೆ ಎಂದು ಆಚರಿಸುವುದು ಯಾವುದೇ ಪ್ರಯೋಜನವಿಲ್ಲ.
ಈಗಾಗಲೇ ಅರ್ಕಾವತಿ ನದಿ ಹೋರಾಟ ಸಮಿತಿಯು ಕೆರೆಯ ಉಳಿವಿಗಾಗಿ ಅರ್ಕಾವತಿ ನದಿಯ ಉಳಿವಿಗಾಗಿ ಮೂರು ವರ್ಷಗಳಿಂದ ನಿರಂತರ ಹೋರಾಟ ಮಾಡ್ತಾ ಬಂದಿದೆ. ಆದರೆ ಯಾವುದೇ ಕಿಲುಬು ಕಾಸಿನ ಕಾರ್ಯ ಆಗಿಲ್ಲ.
ರಾಜ್ಯದಲ್ಲೇ ಅತಿ ಹೆಚ್ಚು ಕಲುಷಿತ ಗೊಂಡಿರುವ ನದಿಗಳ ಪೈಕಿ ಅರ್ಕಾವತಿ ನದಿಯೇ ಪ್ರಥಮ ಸ್ಥಾನದಲ್ಲಿದೆ ಆದ್ದರಿಂದ ಅರ್ಕಾವತಿ ನದಿ ಹೋರಾಟ ಸಮಿತಿಯು 22 ಮಾರ್ಚ್ 2025 ರಂದು ತಾಲೂಕು ಕಚೇರಿ ಮುಂದೆ ಕಪ್ಪು ಪಟ್ಟಿ ಧರಿಸಿ ಮೌನಚರಣೆ ಮಾಡಬೇಕೆಂದು ನಿರ್ಧರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ಸತೀಶ್, ವಸಂತ್ ಕುಮಾರ್, ಎಲ್ಐಸಿ ಮಂಜುನಾಥ್, ರಾಮಕೃಷ್ಣಪ್ಪ, ತಳವಾರ ನಾಗರಾಜ್, ನರಸಿಂಹ ಮೂರ್ತಿ, ಮುನಿಕೃಷ್ಣಪ್ಪ, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.