ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡಪರ ಹೋರಾಟಗಾರರೂ ಸಹ ಇಂದು “ಕರ್ನಾಟಕ ಬಂದ್” ಮಾಡಿದ್ದಾರೆ.
ಇಂದು ಚೆನ್ನೈ ಪ್ರವಾಸ ಕೈಗೊಂಡಿರುವ ಡಿಕೆ ಶಿವಕುಮಾರ್ ಅವರೇ, ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ತಮಿಳುನಾಡು ಸಿಎಂ ಸ್ಟಾಲಿನ್ ಬಳಿ ಯೋಜನೆಗೆ ಒಪ್ಪಿಸುವ ಕೆಲಸ ಮಾಡಲಿ, ಕನ್ನಡಿಗರ ಹಿತವನ್ನು ಕಾಪಾಡಲಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.
“ನಮ್ಮ ನೀರು, ನಮ್ಮ ಹಕ್ಕು” ಎಂದು ಢೋಂಗಿ ಪಾದಯಾತ್ರೆ ಮಾಡಿ, ಅಧಿಕಾರಕ್ಕೆ ಬಂದರೇ ಮೇಕೆದಾಟು ಯೋಜನೆ ಜಾರಿಮಾಡುತ್ತೇವೆ ಎಂದು, ಜನರಿಗೆ ಚೊಂಬು ಕೊಟ್ಟಿರುವ ಕರ್ನಾಟಕ ಕಾಂಗ್ರೆಸ್, ರಾಜಕೀಯ ಬದಿಗಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಿ. ಇಂಡಿ(INDI) ಕೂಟದ ಮಿತ್ರ ಪಕ್ಷವಾದ ಡಿಎಂಕೆ ಜೊತೆ ಅಡ್ಜೆಸ್ಟ್‌ಮೆಂಟ್‌ರಾಜಕೀಯ ಬಿಟ್ಟು, ಕರ್ನಾಟಕದ ಹಿತರಕ್ಷಣೆ ಮಾಡಲಿ ಎಂದು ಜೆಡಿಎಸ್ ತಾಕೀತು ಮಾಡಿದೆ.