ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಕಂಪ್ಯೂಟರ್ ಆಪರೇಟರ್, ಕಾಯಕಮಿತ್ರ ಹಾಗೂ ಬಿ.ಎಫ್.ಟಿಯ ಕೆಲವು ಸಿಬ್ಬಂದಿಗಳು ನರೇಗಾ (NREGA)ಯೋಜನೆಯ ಕೆಲಸಗಳನ್ನು ಮಾಡುತ್ತಿದ್ದು
ಅಂತವರ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪು ಎಸಗಿದ್ದರೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿಯ ಸಹಾಯ ನಿರ್ದೇಶಕರು(ನರೇಗಾ) ರವರಿಗೆ ಮಹಾನಾಯಕ ದಲಿತಸೇನೆ ಸಂಘಟನೆಯ ವತಿಯಿಂದ ಮನವಿ ಪತ್ರ ನೀಡಿ ಒತ್ತಾಯಿಸಲಾಯಿತು.
ಮಹಾ ನಾಯಕ ದಲಿತಸೇನೆ ಸಂಘಟನೆಯ ಮುಖಂಡ ಕೆ.ಪಿ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಮನವಿ ಪತ್ರ ಅರ್ಪಿಸಿ ತನಿಖೆಗೆ ಒತ್ತಾಯಿಸಿದರು.