ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತೀಯ ನ್ಯಾಯ ಸಂಹಿತೆಯಲ್ಲಿ ವರದಕ್ಷಿಣೆ ಕಿರುಕುಳ ಕಾನೂನು ದುರ್ಬಳಕೆ ಕುರಿತು ಚರ್ಚೆಯಾಗಬೇಕು. ಕಾನೂನಿನಲ್ಲಿ ಬದಲಾವಣೆ ಆಗಬೇಕು. ದೇಶ ಹಾಗೂ ರಾಜ್ಯದ ಕಾನೂನಿನಲ್ಲಿಯೂ ಬದಲಾವಣೆ ಆಗಬೇಕಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಭಾನುವಾರ ಮಾತನಾಡಿದ ಅವರು, ಟೆಕ್ಕಿ ಅತುಲ್ ಸುಭಾಷ್ ಪತ್ನಿ ನಿಖಿತಾ, ಅತ್ತೆ ನಿಶಾ ಮತ್ತು ಬಾಮೈದ ಅವರನ್ನು ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಈಗಾಗಲೇ ಡೆತ್ನೋಟ್ ವಶ ಪಡಿಸಿಕೊಂಡಿದ್ದಾರೆ. ಮಹಿಳೆಯರಿಗಿರುವ ಕಾನೂನು ದುರ್ಬಳಕೆ ಆಗಿದೆ ಎಂಬುದೂ ಸೇರಿದಂತೆ ಅನೇಕ ವಿಚಾರಗಳನ್ನು ಡೆತ್ನೋಟಲ್ಲಿ ಅತುಲ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.
ಕಾನೂನಿನಲ್ಲಿರುವ ಅಂಶಗಳು ಗಂಡಂದಿರು ಮತ್ತು ಕುಟುಂಬದ ಸದಸ್ಯರಿಗೆ ತೊಂದರೆ ಆಗುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ. ಮಹಿಳೆಯರಿಗೆ ಕೊಟ್ಟಿರುವ ಹಕ್ಕು ದುರ್ಬಳಕೆ ಆಗುತ್ತಿದೆ ಎನ್ನುವ ಕೂಗು ಕೇಳಿ ಬಂದಿದೆ ಎಂದು ಸಚಿವರು ತಿಳಿಸಿದರು.
ಅನ್ವರ್ ಮಾಣಿಪ್ಪಾಡಿ 150 ಕೋಟಿ ರೂ ಕುರಿತು ಮಾಡಿರುವ ಆರೋಪಕ್ಕೆ, ವಿಡಿಯೋ ಫೂಟೇಜ್ ಇದೆ. ಮಾಧ್ಯಮಗಳಲ್ಲೂ ಅದನ್ನು ಕವರ್ ಮಾಡಿದ್ದಾರೆ. ಈಗ ಮಾತು ಬದಲಾಯಿಸುತ್ತಾರೆ ಅಂದ್ರೆ ಅದನ್ನು ಯಾವ ರೀತಿ ತೆಗೆದುಕೊಳ್ಳಬೇಕು ಅಂತ ಗೊತ್ತಾಗ್ತಿಲ್ಲ. ಒಂದಂತೂ ನಿಜ ವಿಜಯೇಂದ್ರ ಅವರ ಮನೆಗೆ ಹೋಗಿದ್ರು. ಈ ಬಗ್ಗೆ ಅವರೇ ಹೇಳಿದ್ರು. ಅವರು ಹೇಳಲಿಲ್ಲಂದ್ರೆ ಯಾರಿಗೆ ಗೊತ್ತಾಗುತ್ತಿತ್ತು? ಎಂದು ಸಚಿವ ಪರಮೇಶ್ವರ್ ಪ್ರಶ್ನಿಸಿದರು.
ಮಾಧ್ಯಮದವರು ಕೇಳಿದಾಗ ಕನ್ಫರ್ಮ್ ಮಾಡಿದ್ದಾರೆ. ಈಗ ಬಂದು ಹೇಳಲಿಲ್ಲ ಅಂದ್ರೆ ಮಾತಿನಲ್ಲಿ ನಂಬಿಕೆ ಇಲ್ಲ ಅಂತ ಆಗುತ್ತೆ. ನೋಡೋಣ ಸೋಮವಾರ ಸದನದಲ್ಲಿ ಪ್ರಸ್ತಾಪ ಮಾಡಬಹುದು ಎಂದು ಹೇಳಿದರು.
ಕೋವಿಡ್ ಭ್ರಷ್ಟಾಚಾರ ಆಗಿರುವುದು ಸತ್ಯ. ಜಸ್ಟೀಸ್ ಮೈಕಲ್ ಡಿ‘ಕುನ್ಹಾ ಹೇಳಿದ್ದಾರೆ. ಕುನ್ಹಾ ಅವರು ವರದಿಯಲ್ಲಿ ಪ್ರತಿ ಸೆಕ್ಷನ್ ನೋಡಿದ್ದಾರೆ. ಮಾಸ್ಕ್ ಕಿಟ್ ಖರೀದಿ, ಆಕ್ಸಿಜನ್, ಮೆಡಿಸಿನ್ ಎಲ್ಲವನ್ನೂ ಪ್ರತ್ಯೇಕವಾಗಿ ಪರಿಶೀಲಿಸಿ ನೋಡಿದ್ದಾರೆ. ಅದರ ಆಧಾರದ ಮೇಲೆ FIR ಹಾಕಲಾಗಿದೆ.
ಅವ್ಯವಹಾರ ಆಗಿರೋದು ಸತ್ಯ. ಅದಕ್ಕಾಗಿ ಸಿಎಂ ತನಿಖೆ ಮಾಡಿಸೋದಾಗಿ ಹೇಳಿದ್ರು. ನೂರಾರು ಕೋಟಿ ಹಗರಣ ಅಂತ ಆರೋಪ ಮಾಡಿದ್ದೆವು. ಅದಕ್ಕಾಗಿ ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದ್ದೇವೆ. ಇದರಲ್ಲಿ ರಾಜಕಾರಣಿಗಳ ಹೆಸರೂ ಇದ್ದರೆ ಅವರ ಮೇಲೂ FIR ಹಾಕುತ್ತೇವೆ. ಖರೀದಿ ಮಾಡಲು ಸೂಚನೆ ನೀಡಿದ್ದು, ಅದರಂತೆ ಮಾಡಿದ್ದರೆ ರಾಜಕಾರಣಿಗಳ ಮೇಲೂ ಕ್ರಮಆಗುತ್ತದೆ ಎಂದು ತಿಳಿಸಿದರು.
ವಕ್ಫ್ ಬದಲು ಈಗ ಪಹಣಿಯಲ್ಲಿ ಕರ್ನಾಟಕ ಸರ್ಕಾರ ಅಂತ ನಮೂದಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕರ್ನಾಟಕ ಸರ್ಕಾರ ಅಂತ ಇರೋದಕ್ಕೂ ಆರೋಪ ಸರಿಯಲ್ಲ. ಸರ್ಕಾರದ ಆಸ್ತಿ ಸರ್ಕಾರಕ್ಕೆ ಬಂದಿದೆ ಅಂದ್ರೆ ಸಂತೋಷಪಡಬೇಕು. ಅದಕ್ಕೂ ಆರೋಪ ಮಾಡೋದು ಸರಿಯಲ್ಲ ಎಂದು ಸಚಿವರು ಹೇಳಿದರು.