ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ನಾಡಗೀತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸರಿಯಾಗಿ ಓದಲಿ, ಯಾರು, ಯಾರು ಸೇರಿದರೆ ನಮ್ಮ ನಾಡು ಶಾಂತಿಯ ತೋಟ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲಿ! ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಾಕೀತು ಮಾಡಿದ್ದಾರೆ.
ಮುಸ್ಲಿಂ, ಸಿಕ್, ಜೈನ, ಪಾರ್ಸಿ, ಬೌದ್ಧರು ಇವರೆಲ್ಲ ನಮ್ಮ ದೇಶದ ಹಾಗೂ ಕರ್ನಾಟಕದ ಪ್ರಜೆಗಳು, ನಾವು ಎಲ್ಲಾ ಅಲ್ಪಸಂಖ್ಯಾತರು, ಹಿಂದುಳಿದವರ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ವಿಜಯೇಂದ್ರಗೆ ಡಿಸಿಎಂ ಟಾಂಗ್ ನೀಡಿದ್ದಾರೆ.
‘ಸಮಬಾಳು ಸಮಪಾಲು‘ ಎನ್ನುವ ವಿಜಯೇಂದ್ರ ಅಲ್ಪಸಂಖ್ಯಾತರಲ್ಲಿ ಯಾರಾದರೊಬ್ಬರನ್ನು ವಿಧಾನಪರಿಷತ್ ಸದಸ್ಯ, ರಾಜ್ಯ ಸಭಾ ಸದಸ್ಯರನ್ನಾಗಿ, ಕೇಂದ್ರ ಸಂಪುಟದಲ್ಲಿ ಮಂತ್ರಿ ಮಾಡಲಿ! ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸವಾಲ್ ಹಾಕಿದ್ದಾರೆ.