ವ್ಯಸನಮುಕ್ತ ಸಮಾಜ ನಿರ್ಮಾಣ ಆದ್ಯತೆಯಾಗಲಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್‌
, ಬೆಂ.ಗ್ರಾ ಜಿಲ್ಲಾ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ತಾಲೂಕಿನ ತಪಸೀಹಳ್ಳಿಯ ಪುಷ್ಪಾಂಡಜಮುನಿ ಆಶ್ರಮದಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರದಲ್ಲಿ ಮಂಗಳವಾರ ಉಪನ್ಯಾಸ ಹಾಗೂ ಪ್ರೇರಣಾದಾಯಕ ತರಗತಿಗಳನ್ನು ನಡೆಸಲಾಯಿತು.

ಪ್ರೇರಣಾದಾಯಕ ತರಗತಿಯಲ್ಲಿ ಪಾಲ್ಗೊಂಡ ಲಯನ್ಸ್‌ಕ್ಲಬ್‌ಆಫ್‌ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನ ಅಧ್ಯಕ್ಷ ಪ್ರೊ.ರವಿಕಿರಣ್‌ಕೆ.ಆರ್ ಮಾತನಾಡಿ, ದುರ್ವ್ಯಸನ ಬದುಕನ್ನು ಕರಾಳವಾಗಿಸುತ್ತದೆ.

- Advertisement - 

ವಯೋ ಸಹಜವಾದ ಧನಾತ್ಮಕ ಆಲೋಚನೆಗಳು, ಜೀವನಪ್ರೀತಿ, ವ್ಯಕ್ತಿಗತ ಸಂಬಂಧಗಳ ಮೌಲ್ಯಗಳ ಕುರಿತ ಅರಿವು ವ್ಯಕ್ತಿಯನ್ನು ಹೊಣೆಯಾಧಾರಿತವಾಗಿ ರೂಪಿಸುತ್ತದೆ. ಭಾವನಾತ್ಮಕ ವಿಚಾರಗಳು ವ್ಯಕ್ತಿಯನ್ನು ಕೆಲವೊಮ್ಮೆ ಶಿಸ್ತುಬದ್ದವಾಗಿ ರೂಪಿಸುತ್ತವೆ. ಈ ನಿಟ್ಟಿನಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣ ಎಲ್ಲರ ಆದ್ಯತೆಯಾಗಬೇಕು ಎಂದರು.

ಇಂದು ಸಮಾಜದಲ್ಲಿ ನಡೆಯುತ್ತಿರುವ ಹಲವು ಅಪರಾಧ ಪ್ರಕರಣಗಳಿಗೆ ಕುಡಿತ, ಮಾದಕ ವ್ಯಸನ ಇತ್ಯಾದಿಗಳು ಕಾರಣವಾಗುತ್ತಿವೆ. ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಿ, ಕೌಟುಂಬಿಕ ಸಂಬಂಧಗಳನ್ನೂ ಹಾಳು ಮಾಡಿಕೊಳ್ಳಲು ವ್ಯಸನ ಕಾರಣವಾಗಿದ್ದು, ಮಾರಕವಾದ ಪಿಡುಗನ್ನು ನಿಯಂತ್ರಿಸುವುದು ಅತ್ಯಗತ್ಯ ಎಂದು ತಿಳಿಸಿದರು.

- Advertisement - 

ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ, ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ದೊಡ್ಡಬಳ್ಳಾಪುರ ಯೋಜನಾಧಿಕಾರಿ ಎನ್.ಆರ್.ದಿನೇಶ್, ಗಿರೀಶ್‌, ನಿವೃತ್ತ ಅಧ್ಯಾಪಕ ಕೆ.ಮಹಾಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಯಿತು.

 

 

 

 

Share This Article
error: Content is protected !!
";