ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನರೇಗಾ ಮರಳಿ ತರೋಣ ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ರಕ್ಷಿಸೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಗ್ರಾಮೀಣ ಭಾಗದ ಬಡ ಜನರ ಉದ್ಯೋಗದ ಹಕ್ಕನ್ನು ಕಸಿದ ಕೇಂದ್ರ ಸರ್ಕಾರದ ಅನ್ಯಾಯದ ವಿರುದ್ಧ, ವಿಬಿ-ಜಿರಾಮ್-ಜಿ ಯೋಜನೆ ಅನುಷ್ಠಾನ ಖಂಡಿಸಿ ಹಾಗೂ ಬಡವರ ಬದುಕಿನ ಆಧಾರವಾಗಿರುವ ಮನರೇಗಾ ಯೋಜನೆ ಪುನರ್ ಸ್ಥಾಪನೆಗೆ ಆಗ್ರಹಿಸಿ ಇಂದು ನಡೆಯುತ್ತಿರುವ ‘ಮನರೇಗಾ ಬಚಾವೋ ಸಂಗ್ರಾಮ‘ ಬೃಹತ್ ಪ್ರತಿಭಟನೆಯಲ್ಲಿ ನೀವೂ ಕೈಜೋಡಿಸಿ.. ಗ್ರಾಮೀಣ ಕಾರ್ಮಿಕರ ರಕ್ಷಣೆಗಾಗಿ ಧ್ವನಿ ಎತ್ತಿ ಎಂದು ಅವರು ಕರೆ ನೀಡಿದ್ದಾರೆ.

