ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕುವೆಂಪು ಅವರ ಜಯಂತಿಯ ದಿನವಾದ ಡಿಸೆಂಬರ್ 29ರ ಈ ದಿನದಂದು ಅವರ ಜ್ಞಾನ ಭಂಡಾರವನ್ನು ಸ್ಮರಿಸಿ ನಮಿಸೋಣ. ಎಲ್ಲಾದರಿರು ಎಂತಾದರಿರು ಎಂದೆಂದಿಗು ನೀ ಕನ್ನಡಿಗನಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಈ ವಾಕ್ಯದ ಸಾಲುಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ನುಡಿಮುತ್ತುಗಳು.
ಕುವೆಂಪು ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟಪ್ಪ ತಾಯಿ ಸೀತಮ್ಮ. ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಕುವೆಂಪು ಎಂಬ ಹೆಗ್ಗಳಿಕೆಯ ಹೆಸರಿನಲ್ಲಿ ಪ್ರಸಿದ್ಧರಾದವರು.
ಭಾರತೀಯ ಕವಿ, ನಾಟಕಕಾರರು, ಕಾದಂಬರಿಕಾರರು ಹಾಗೂ ವಿಮರ್ಶಕರು. 20 ನೇ ಶತಮಾನದ ಕನ್ನಡದ ಶ್ರೇಷ್ಠಕವಿ. ಕುವೆಂಪು ಅವರಲ್ಲಿರುವ ಸಾಹಿತ್ಯದ ಭಂಡಾರಕ್ಕೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸೇರಿದಂತೆ ಪದ್ಮಭೂಷಣ. ಪದ್ಮವಿಭೂಷಣ ಜೊತೆಗೆ ಇನ್ನು ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಕುವೆಂಪು ಅವರನ್ನು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಕ ಮಾಡಲಾಗಿತ್ತು.
ಕರ್ನಾಟಕದ ನಾಡಗೀತೆಯಾದ ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಈ ಕವಿತೆಯ ಪಕ್ಷಿನೋಟ ಕುವೆಂಪುರವರ ಜ್ಞಾನದ ಮೆರುಗನ್ನು ಹೆಚ್ಚಿಸಿದೆ .
ಶ್ರೀ ರಾಮಾಯಣ ದರ್ಶನಂ ಹಾಗೂ ಕಾನೂರು ಹೆಗ್ಗಡತಿ ಈ ಕಾದಂಬರಿಗಳು ಕುವೆಂಪು ಅವರ ಕೃತಿಗಳಲ್ಲಿ ಪ್ರಮುಖವಾದವು. ಕುವೆಂಪು ಅವರ ಇನ್ನು ಅನೇಕ ಕವನಗಳು ಹಾಗೂ ಕಾದಂಬರಿಗಳು ಕನ್ನಡದ ಶಬ್ದಕೋಶದ ಘನತೆಯನ್ನು ಹೆಚ್ಚಿಸಿವೆ.
ಲೇಖನ-ರಘು ಗೌಡ 9916101265