ಚಂದ್ರವಳ್ಳಿ ನ್ಯೂಸ್, ಮೈಸೂರು:
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮಗಳ ಕುರಿತ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವೂ ಮುಡಾ ಆಯುಕ್ತರಿಗೆ ಪತ್ರ ಬರೆದು 631 ಸೈಟ್ಗಳ ವಿವರ ಕೇಳಿದೆ.
ಮೈಸೂರಿನ ಮುಡಾ ಅಭಿವೃದ್ಧಿ ಪಡಿಸಿರುವ ವಿವಿಧ ಬಡಾವಣೆಗಳಾದ ಮೈಸೂರು ನಗರದ ಶ್ರೀರಾಪುರ, ವಿಜಯನಗರ, ರಾಮಕೃಷ್ಣ ನಗರ, ಆಲನಹಳ್ಳಿ, ಬೋಗಾದಿ, ದೇವನೂರು, ಹಂಚಾ ಸಾತಗಳ್ಳಿ, ಹೆಬ್ಬಾಳ್‌ಸೇರಿದಂತೆ ಸುಮಾರು 631 ನಿವೇಶನಗಳ ವಿವರವನ್ನು ಇಡಿ ಅಧಿಕಾರಿಗಳು ಕೇಳಿದ್ದಾರೆ.
ನಿವೇಶನಗಳಿಗೆ ಸಂಬಂಧಿಸಿದಂತೆ ಮಾಲೀಕರು, ಅವರ ವಿಳಾಸಗಳನ್ನು ಕೂಡಬೇಕು ಎಂದು ಜಾರಿ ನಿರ್ದೇಶನಾಲಯ ಕೋರಿದೆ. ಹಾಗೇ ನಿವೇಶನ ಹಂಚಿಕೆದಾರರ ವಿವರಗಳು, ಹೆಸರು, ವಿಳಾಸ, ಹಂಚಿಕೆ ದಿನಾಂಕ, ಹಂಚಿಕೆಯ ಗಾತ್ರ, ಹಂಚಿಕೆ ಮಾಡಿರುವ ಭೂಮಿಯ ವಿವರಗಳು, ಗ್ರಾಮಗಳು, ಉತ್ತೇಜಿತ ನಿವೇಶನದ ಸಂದರ್ಭದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯ ಸರ್ವೆ ಸಂಖ್ಯೆ ವಿಸ್ತೀರ್ಣವನ್ನು ಸಹ ಉಲ್ಲೇಖಿಸಬಹುದು ಎಂದು ಇಡಿ ಹೇಳಿದೆ.