ಸುಳ್ಳುಬುರುಕ ರಾಹುಲ್ ಗಾಂಧಿ, ಜೀನ್ಸ್ ಪಾರ್ಕ್ ಎಲ್ಲಪ್ಪ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಳ್ಳುಬುರುಕ ರಾಹುಲ್ ಗಾಂಧಿ, ಜೀನ್ಸ್ ಪಾರ್ಕ್ ಎಲ್ಲಪ್ಪ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿಯಲ್ಲಿ “ಜೀನ್ಸ್ ಪಾರ್ಕ್” ಮಾಡುತ್ತೇವೆ, ಬಳ್ಳಾರಿಯನ್ನು “ಜೀನ್ಸ್ ರಾಜಧಾನಿ” ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷ ಈಗ ಸರಿಯಾದ ಮೂಲ ಸೌಕರ್ಯವಿಲ್ಲದೆ 36 ಜೀನ್ಸ್ ತಯಾರಿಕಾ ಘಟಕಗಳು ಮುಚ್ಚುವ ಪರಿಸ್ಥಿತಿ ತಂದಿಟ್ಟಿದೆ. ಇದರಿಂದ 2 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.

- Advertisement - 

ರಾಹುಲ್ ಗಾಂಧಿ ಅವರೇ, ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ಇನ್ನೂ take off ಆಗದ ನಿಮ್ಮ ಕಾಂಗ್ರೆಸ್ ಸರ್ಕಾರವನ್ನ ಈಗಲಾದರೂ ಎಬ್ಬಿಸದಿದ್ದರೆ ನಿಮ್ಮ ಪಕ್ಷಕ್ಕೆ ಬಿಹಾರದಲ್ಲಿ ಬಂದ ಗತಿಯೇ ಕರ್ನಾಟಕದಲ್ಲೂ ಬರುವುದು ನಿಶ್ಚಿತ.

ಸಿಎಂ ಸಿದ್ದರಾಮಯ್ಯ ಅವರೇ, ಜೀನ್ಸ್ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಿ. ಜೀನ್ಸ್ ಪಾರ್ಕ್ ನಿರ್ಮಾಣವಾಗಿ ಜೀನ್ಸ್ ತಯಾರಿಕಾ ಘಟಕಗಳಿಗೆ ಅಗತ್ಯವಾದ STP ಗಳು ಇದ್ದಿದ್ದರೆ, ಹೀಗೆ ರಾತ್ರೋರಾತ್ರಿ ಘಟಕಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತಿರಲಿಲ್ಲ. ಏಳಿ ಸ್ವಾಮಿ, ಎದ್ದೇಳಿ. ಕರ್ನಾಟಕವನ್ನು ಉಳಿಸಿ ಎಂದು ಅಶೋಕ್ ತಾಕೀತು ಮಾಡಿದ್ದಾರೆ.

- Advertisement - 

 

 

Share This Article
error: Content is protected !!
";