ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ದೇವಾನುದೇವತೆಗಳ ಅನುಗ್ರಹದಿಂದ ಸಮಾಜದಲ್ಲಿ ಸತ್ಕಾರ್ಯಗಳು ನಡೆಯುತ್ತಿರುತ್ತವೆ. ಆದ್ದರಿಂದ ಪ್ರತಿನಿತ್ಯ ಹಾಗೂ ಹಬ್ಬದ ಸಂದರ್ಭಗಳಲ್ಲಿ ವಿಶೇಷವಾಗಿ ದೇವರ ಆರಾಧನೆ ಅಗತ್ಯ. ದೈವಶಕ್ತಿಯ ಅರಿವು ಹೊಂದಿದಲ್ಲಿ ಬದುಕು ಸಾರ್ಥಕ ಎಂದು ಶಿಕ್ಷಕಿ ವೀಣಾ ತಿಳಿಸಿದರು.
ಶ್ರೀ ಮೈಲಮ್ಮ ದೇವಿ, ಶ್ರೀ ಕೆಂಚಮ್ಮ ದೇವಿ ಸೇವಾ ಸಮಿತಿ ವತಿಯಿಂದ ನಗರದ ಬೊಮ್ಮನಕಟ್ಟೆಯಲ್ಲಿರುವ ಮೈಲಮ್ಮ ದೇವಿ, ಅಂತರಘಟ್ಟಮ್ಮ ದೇವಿ, ಕೆಂಚಮ್ಮ ದೇವಿ, ಭಂಡಿ ಭಂಡಾರದಮ್ಮ ದೇವಿ ದೇವಸ್ಥಾನದಲ್ಲಿ ೧೧-೧೦-೨೦೨೪ರ ಶುಕ್ರವಾರ ಸಂಜೆ ಶರನ್ನವರಾತ್ರಿ ಹಾಗೂ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಪ್ರದಾಯ, ಆಚಾರ, ವಿಚಾರ, ನಂಬಿಕೆ, ಶ್ರದ್ಧೆಗಳು ನಮ್ಮ ಪೂರ್ವಿಕರು ನೀಡಿರುವ ಕೊಡುಗೆಗಳಾಗಿವೆ. ಧಾರ್ಮಿಕ ಕಾರ್ಯಗಳಿಂದ ಬದುಕಿನಲ್ಲಿ ಬರುವ ಸಂಕಷ್ಟ ದೂರವಾಗುತ್ತದೆ. ನೋವು ಮರೆಯಾಗುತ್ತದೆ. ಆದ್ದರಿಂದ ಭಗವಂತನ ಆರಾಧನೆಯನ್ನು ಭಕ್ತಿಯಿಂದ ಮಾಡಬೇಕೆಂದು ಹೇಳಿದರು.
ದೇವಾಲಯಗಳು ನಮ್ಮ ಸಂಸ್ಕೃತಿಯ ಸಾಕ್ಷಿರೂಪ ಶ್ರದ್ಧಾ ಕೇಂದ್ರಗಳಾಗಿವೆ. ಹಬ್ಬದ ಸಂದರ್ಭದಲ್ಲಿ ಜಾತಿ, ಮತ್ದ ಬೇಧವಿಲ್ಲದೆ ನಾವೆಲ್ಲಾ ಬಂದೆಡೆ ಸೇರುವುದರಿಂದ ಸೌಹಾರ್ದತೆ, ಭಾವೈಕ್ಯತೆ ಬೆಳೆಯುತ್ತದೆ. ಹಬ್ಬಗಳು ಮನಸ್ಸಿಗೆ ಸಮಾಧಾನ ತರುವುದಲ್ಲದೆ ಸಮಾಜದಲ್ಲಿ ಶಾಂತಿ ನೆಲೆಸಲು ಕಾರಣವಾಗಬೇಕೆಂದರು.
ದಸರಾ ಸಂದರ್ಭದಲ್ಲಿ ಆಚರಿಸಲ್ಪಡುವ ಬನ್ನಿ ಮುಡಿಯುವ ಕಾರ್ಯಕ್ರಮ ಭಕ್ತಿ- ಭಾವದ ಸಂಗಮವಾಗಿದೆ. ಹಳಸಿದ ಸಂಬಂಧವನ್ನು ಸರಿಹೊಂದಲು, ಹೊಸ ಸ್ನೇಹ, ಸಂಬಂಧ ಬೆಸೆಯಲು ಕಾರಣವಾಗುತ್ತದೆ.
ಪತ್ರಕರ್ತ ಗಜೇಂದ್ರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.