ದೇಶಕ್ಕೆ ಕಾಂಗ್ರೆಸ್‌ ಕ್ಯಾನ್ಸರ್‌ ಇದ್ದಂತೆ, ವಿರೋಧಿ ನಿಲುವು ಕಾಂಗ್ರೆಸ್ ರಕ್ತದಲ್ಲೇ ಇದೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಯುವರಾಜ ರಾಹುಲ್ ಗಾಂಧಿ
ಭಾರತದ ವಿರುದ್ಧ ಹೋರಾಡುವ ಹೇಳಿಕೆ ನೀಡಿರುವುದರಲ್ಲಿ ಅತಿಶಯೋಕ್ತಿಯಿಲ್ಲ. ಭಾರತ ವಿರೋಧಿ ನಿಲುವು ಭಾರತೀಯ ಕಾಂಗ್ರೆಸ್ ಪಕ್ಷದ ರಕ್ತದಲ್ಲೇ ಇದೆ. ಕಾಂಗ್ರೆಸ್ಸಿನ ನರನಾಡಿಗಳಲ್ಲೂ ದೇಶ ವಿರೋಧಿ ಚಿಂತನೆಯೇ  ಹರಿದಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ಅಂದು ಬ್ರಿಟೀಷರಿಂದ ಸ್ಥಾಪಿಸಲ್ಪಟ್ಟ ಕಾಂಗ್ರೆಸ್‌ಪಕ್ಷ ನೆಹರೂ ಕಾಲದಿಂದ ಹಿಡಿದು ಇಂದಿನ ರಾಹುಲ್‌ಕಾಲದವರೆಗೂ ಪರಕೀಯರ ಪರವಾಗಿಯೇ ಇದೆ. ಇಂದಿಗೂ ಕಾಂಗ್ರೆಸ್ಸಿನ ಹಿಡಿತ ಇಟಲಿ ಮಾತೆಯ ಕೈಯಲ್ಲಿದೆ. ಭಾರತವನ್ನು ತನ್ನ ಆತ್ಮ ಎಂದು ಕಾಂಗ್ರೆಸ್‌ಅಪ್ಪಿತಪ್ಪಿಯೂ ಹೇಳುವುದಿಲ್ಲ ಎಂದು ಬಿಜೆಪಿ ಟೀಕಿಸಿದೆ.

ಕಾಂಗ್ರೆಸ್‌ಮಾನಸಿಕತೆಯೇ ಭಾರತ ವಿರೋಧಿಯಾಗಿದೆ, ಕಾಂಗ್ರೆಸ್‌ಈ ದೇಶಕ್ಕೆ ಕ್ಯಾನ್ಸರ್‌ಇದ್ದಂತೆ. ಕಾಂಗ್ರೆಸ್‌ಇದ್ದಷ್ಟು ದಿನವೂ ಅದು ಭಾರತವನ್ನು ಕಾಡುತ್ತಲೇ ಇರುತ್ತದೆ ಎಂದು ಬಿಜೆಪಿ ಎಚ್ಚರಿಸಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";