ಸೆ.22 ರಿಂದ 24ರವರೆಗೆ ಲಿಂ.ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಸಮಾರಂಭ

News Desk

ಚಂದ್ರವಳ್ಳಿ ನ್ಯೂಸ್, ಸಿರಿಗೆರೆ:
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಹಿರಿಯ ಲಿಂ. ಶ್ರೀಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ೩೪ನೇ ಶ್ರದ್ಧಾಂಜಲಿ ಸಮಾರಂಭವು ಸೆ.೨೨ ರಿಂದ ೨೪ರವರೆಗೆ ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಅದ್ದೂರಿಯಾಗಿ ಜರುಗಲಿದ್ದು
, ಸಿದ್ದತೆಗಳು ಭರದಿಂದ ಸಾಗಿವೆ.

ಸೆ. ೨೨ರ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ತರಳಬಾಳು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತರಳಬಾಳು ಪ್ರತಿಭಾ ಪುರಸ್ಕಾರ ಜರುಗಲಿದ್ದುಮುಖ್ಯ ಅತಿಥಿಗಳಾಗಿ ಚಿತ್ರದುರ್ಗ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಕಾರಿ ಡಾ.ಎಸ್.ಆಕಾಶ್, ಉಪ ನಿರ್ದೇಶಕ ಕೆ.ತಿಮ್ಮಯ್ಯ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಭಾಗವಹಿಸಲಿದ್ದಾರೆ.

- Advertisement - 

ಸಂಜೆ ೬ ಗಂಟೆಗೆ ಬೆಂಗಳೂರು ಬೇಲಿಮಠ ಮಹಾಸಂಸ್ಥಾನದ ಶ್ರೀ ಮು.ನಿ.ಪ್ರ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳವರು ಆಶೀರ್ವಚನ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಗೋವಿಂದ ಕಾರಜೋಳ, ಶಾಸಕರಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಕುಲಪತಿ ಡಾ.ಆರ್.ಸಿ.ಜಗದೀಶ್, ಮಾಜಿ ಶಾಸಕ ಬೆಳ್ಳಿಪ್ರಕಾಶ್, ಬೆಸ್ಕಾಂ ಅಧೀಕ್ಷಕ ಅಭಿಯಂತರೆ ಕೆ.ಸಿ.ಕೋಮಲ, ಚಲನಚಿತ್ರ ನಟ ಡಾ.ಶ್ರೀಧರ್, ವಿಜಯಪುರದ ಉಪ ಪೊಲೀಸ್ ವರಿಷ್ಠಾಕಾರಿ ಬಸವರಾಜ ಫಕ್ಕೀರಪ್ಪ ಯಲಿಗಾರ ಭಾಗವಹಿಸಲಿದ್ದು ಜನಪದ ತಜ್ಞ ಡಾ. ಬಸವರಾಜ ನೆಲ್ಲಿಸರ ರವರು ಜ್ಞಾನಜ್ಯೋತಿ ಹಚ್ಚಿದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಮುದ್ಗಲ್‌ನ ರೆಹಮಾನ್ ಸಾಬ್ ನದಾಫ್ ಅವರಿಂದ ವಚನ ಗಾಯನ ಹಾಗೂ ತರಳಬಾಳು ಕಲಾ ಸಂಘದಿಂದ ನೃತ್ಯ ಪ್ರದರ್ಶನಗಳು ಜರುಗಲಿವೆ.

ಸೆ.೨೩ರ  ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ, ಡಿ.ವೈ.ಎಸ್.ಪಿ ಹೆಚ್.ಜಯರಾಜ್, ಕುಲಪತಿ ಪ್ರೊ.ಶಿವಾನಂದ ಬ ಕೆಳಗಿನಮನಿ, ಉಪನಿರ್ದೇಶಕ ಎಂ.ಆರ್.ಮಂಜುನಾಥ್, ವಿಜ್ಞಾನಿ ರುದ್ರಗೌಡ ಪೊಲೀಸ್ ಪಾಟೀಲ, ಬಿಇಓ ಎಚ್.ಆರ್. ವಿಶಾಲಾಕ್ಷಿ, ಜಯ್ಯಣ್ಣ, ಪಶು ಇಲಾಖೆ ಪಿ.ಮಹೇಶ್‌ ಗೌಡ, ಕನ್ನಡ ಪ್ರಾಧ್ಯಾಪಕ ಡಾ.ಬಿ.ವಿ.ವಸಂತ್‌ಕುಮಾರ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಬಿ.ಎಸ್.ಗಿರಿಜಾ ಮುಂತಾದವರು ಭಾಗವಹಿಸಲಿದ್ದಾರೆ. 

- Advertisement - 

ಸಂಜೆ ೬:೦೦ ಕ್ಕೆ ಗದಗದ ಶ್ರೀ ಶಿವಾನಂದ ಬೃಹನ್ಮಠದ ಶ್ರೀ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳವರು ಆಶೀರ್ವಚನ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಬಿ.ಪಿ.ಹರೀಶ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್‌ಕುಮಾರ್, ಡಾ.ಧನಂಜಯ್ ಸರ್ಜಿ, ಕುಲಪತಿ ಶರತ್‌ ಅನಂತಮೂರ್ತಿ, ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌದರಿ, ತುಮ್‌ಕೋಸ್ ಅಧ್ಯಕ್ಷ ಹೆಚ್.ಎಸ್.ಶಿವಕುಮಾರ್ ಭಾಗವಹಿಸಲಿದ್ದು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಶುಭ ಮರವಂತೆ ಅವರು ಸಿರಿಗೆರೆಯ ಶಿವಸಿರಿ ಹಿರಿಯ ಶ್ರೀ ತರಳಬಾಳು ಜಗದ್ಗುರುಗಳವರು ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕ ಕಲಾಶ್ರೀ ಪುರಸ್ಕೃತ ದೇವೇಂದ್ರಕುಮಾರ್ ಪತ್ತಾರ್ ರವರು ವಚನ ಗಾಯನ ಹಾಡಲಿದ್ದಾರೆ. ರಾತ್ರಿ ೯ ಗಂಟೆಗೆ ಶ್ರೀ ತರಳಬಾಳು ಕಲಾಸಂಘದ ಕಲಾವಿಧರಿಂದ ವಿಶ್ವಬಂಧು ಮರುಳಸಿದ್ಧ ನಾಟಕ ಪ್ರದರ್ಶನಗೊಳ್ಳಲಿದೆ.

ಸೆ.೨೪ರ  ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಅವರು ಗುರುವಂದನೆ ಸಲ್ಲಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಭಾಪತಿ ಬಸವರಾಜ ಹೊರಟ್ಟಿ, ಕಂದಾಯ ಸಚಿವ ಕೃಷ್ಣಭೈರೇಗೌಡ, ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್,

ಮಾಜಿ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್, ಶಾಸಕರಾದ ಯು.ಬಿ.ಬಣಕಾರ, ಡಿ.ಜಿ.ಶಾಂತನಗೌಡ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಹೆಚ್.ಡಿ.ತಮ್ಮಯ್ಯ, ಶಿವಗಂಗಾ ಬಸವರಾಜ್, ಪ್ರಕಾಶ್ ಕೋಳಿವಾಡ, ಮಾಜಿ ಸಚಿವ ಹೆಚ್.ಆಂಜನೇಯ ಭಾಗವಹಿಸಲಿದ್ದು, ನಿವೃತ್ತ ಪ್ರಾಚಾರ್ಯ ಡಾ.ನಾ.ಲೋಕೇಶ ಒಡೆಯರ್ ಅವರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಅಸಾಧಾರಣ ಸಾಧನೆಯ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕ ಕಲಾಶ್ರೀ ಪುರಸ್ಕೃತ ತೋಟಪ್ಪ ಉತ್ತಂಗಿ ಅವರಿಂದ ವಚನ ಗಾಯನ ಹಾಗೂ ತರಳಬಾಳು ಕಲಾ ಸಂಘದಿಂದ ವಚನ ನೃತ್ಯಗಳು ಪ್ರದರ್ಶನಗೊಳ್ಳಲಿವೆ.

ಬಾಕ್ಸ್- ಕೃತಿಗಳ ಲೋಕಾರ್ಪಣೆ-
ತರಳಬಾಳು ಪ್ರಕಾಶನದ ಸಾಹಿತ್ಯ ಸಿರಿ ಮಾಲಿಕೆಯ ಕೃತಿಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಭಾಷಾಂತರಿಸಿದ ಬಸವಣ್ಣನವರ ೧೦೮ ವಚನಗಳ
ಕದಲಿ ಕ ಕರ್ಪೂರ್, ಶಿವಸಿರಿ ಮಹಾಕಾವ್ಯ, ಭರಮಸಾಗರ ತರಳಬಾಳು ಹುಣ್ಣಿಮೆ ಸ್ಮರಣ ಸಂಚಿಕೆ ೨೦೨೫ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

ಬಾಕ್ಸ್-ದಾಸೋಹಕ್ಕೆ ಭಕ್ತಿ ಸಮರ್ಪಣೆ-
ಚನ್ನಗಿರಿಯ ತುಮ್ಕೋಸ್ ಅವರಿಂದ ಲಾಡು ಪ್ರಸಾದ
, ಶಿವಮೊಗ್ಗ ತಾಲ್ಲೂಕು ಹಾಗೂ ಗ್ರಾಮಾಂತರ ಶಿಷ್ಯ ಮಂಡಳಿ, ಮಡಿಕೆಚೀಲೂರು ಗ್ರಾಮಸ್ಥರು, ದಾವಣಗೆರೆ ನಗರದ ಶಿಷ್ಯ ಮಂಡಳಿ, ಹೊಸ ನೆಲವಾಗಲು ಗ್ರಾಮಸ್ಥರು ಮತ್ತು ರಾಣೆಬೆನ್ನೂರು ತಾಲೂಕು ಶಿಷ್ಯ ಮಂಡಳಿ, ನಿಟ್ಟೂರು ಗ್ರಾಮಸ್ಥರು ಮತ್ತು ಹರಿಹರ ತಾಲೂಕು ಶಿಷ್ಯ ಮಂಡಳಿ, ಯಕ್ಕನಹಳ್ಳಿ ಗ್ರಾಮಸ್ಥರು ಮತ್ತು ಹೊನ್ನಾಳಿ, ನ್ಯಾಮತಿ ತಾಲೂಕು ಶಿಷ್ಯ ಮಂಡಳಿಯವರು ದಾಸೋಹಕ್ಕೆ ಭಕ್ತಿ ಸಮರ್ಪಿಸಿದ್ದುಸಿರಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಜೊತೆಗೆ ಹರಪನಹಳ್ಳಿ ತಾಲೂಕಿನ ಶಿಷ್ಯ ಮಂಡಳಿಯವರು ದಾಸೋಹ ಸೇವಕರ್ತರಾಗಿ ಸೇವೆ ಸಲ್ಲಿಸಲಿದ್ದಾರೆ.

ಸಮಾಜಮುಖಿ ಕಾರ್ಯಕ್ರಮಗಳು-
ಸೆ.೨೨ರ ಸೋಮವಾರ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಪಶು ಚಿಕಿತ್ಸಾಲಯದಲ್ಲಿ ಉಚಿತ ಪಶು ಚಿಕಿತ್ಸೆ ಜರುಗಲಿದ್ದು
, ೨೩ರ ಮಂಗಳವಾರ ಬೆಳಗ್ಗೆ ಐಕ್ಯಮಂಟಪದ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಶಿವಮಂತ್ರ ಲೇಖನ, ೧೦ ಗಂಟೆಗೆ ರಕ್ತದಾನ ಮತ್ತು ಉಚಿತ ಕಣ್ಣಿನ ತಪಾಸಣೆ ಹಾಗೂ ೧೧ ಗಂಟೆಗೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ ಜರುಗಲಿದೆ.

ಸಂಜೆ ೪ ಗಂಟೆಗೆ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಭಾವಚಿತ್ರದ ಮೆರವಣಿಗೆಯು ಸಿರಿಗೆರೆಯ ಪ್ರಮುಖ ಬೀದಿಗಳಲ್ಲಿ ರೊಬೋಟಿಕ್ ಆನೆ ಮತ್ತು ಜನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಜರುಗಲಿದೆ. ಸೆ.೨೪ರ ಬುಧವಾರ ಐಕ್ಯಮಂಟಪದಲ್ಲಿ ಲಿಂ. ಶಿವಕುಮಾರ ಶ್ರೀಗಳ ಕತೃ ಗದ್ದಿಗೆಯಲ್ಲಿ ವಿಶೇಷ ಪೂಜೆ ಹಾಗೂ ಮಹಾರುದ್ರಾಭಿಷೇಕ, ಶ್ರೀಗಳಿಂದ ಪುಷ್ಪ ನಮನ, ೧೦.೩೦ಕ್ಕೆ ಶಿವ ಧ್ವಜಾರೋಹಣ ಮುಂತಾದ ಕಾರ್ಯಕ್ರಮಗಳು ಜರುಗಲಿವೆ.

 

 

Share This Article
error: Content is protected !!
";